ನಾಗರಾಜ ಬೀರನೂರ ಅವರಿಗೆ “ಡಾ. ಬಿ.ಆರ್. ಅಂಬೇಡ್ಕರ್ ರತ್ನ” ಪ್ರಶಸ್ತಿ

Posted by

ಯಾದಗಿರಿ : ಸಾಮಾಜಿಕ ಕ್ಷೇತ್ರದಲ್ಲಿನ ಗಣನೀಯ ಮತ್ತು ನಿರಂತರ ಸೇವೆಯನ್ನು ಗುರುತಿಸಿ, ಯಾದಗಿರಿ ನಗರದ ವಕೀಲರಾದ ನಾಗರಾಜ ಬೀರನೂರ ಅವರಿಗೆ ಪ್ರತಿಷ್ಠಿತ ‘ಡಾ. ಬಿ.ಆರ್. ಅಂಬೇಡ್ಕರ್ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

​ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೆಂಗಳೂರಿನ ಸರ್. ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ (ಟೌನ್ ಹಾಲ್) ಏಪ್ರಿಲ್ 15ರಂದು ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಮಾರಂಭದಲ್ಲಿ ರಾಜ್ಯದ ಉಪ ಲೋಕಾಯುಕ್ತರಾದ ಬಿ. ವೀರಪ್ಪ, ಪ್ರಮುಖರಾದ ಹೆಚ್.ಟಿ. ನರೇಂದ್ರ ಪ್ರಸಾದ್, ಎಸ್. ರಾಚಯ್ಯ, ರೈಲ್ವೇಸ್ ಪೋಲಿಸ್ ಉಪ-ಮಹಾನಿರಿಕ್ಷಕರಾದ ಜೆ.ಕೆ. ರಶ್ಮಿ, ಮುಖ್ಯ ಆಯುಕ್ತರಾದ ಮಹೇಶ್ವರರಾವ್ ಹಾಗೂ ಎ. ಅಮೃತರಾವ್ ಸೇರಿದಂತೆ ನಾಡಿನ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku