​ಶಿವಪುರದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಜಯಂತಿ ಆಚರಣೆ

Posted by

​ವಡಿಗೇರಾ: ತಾಲೂಕಿನ ಶಿವಪುರ ಗ್ರಾಮದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ 119ನೇ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
​ಗ್ರಾಮ ಘಟಕದ ಅಧ್ಯಕ್ಷರಾದ ಬಾಲಪ್ಪ ಬಂಡಾರಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅವರ ದೇಶಸೇವೆಯನ್ನು ಸ್ಮರಿಸಲಾಯಿತು.

​ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಘಟಕದ ಅಧ್ಯಕ್ಷ ಬಾಲಪ್ಪ ಬಂಡಾರಿ ಅವರು, ಬಾಬು ಜಗಜೀವನರಾಮ್ ಅವರು ದೇಶದ ಕೃಷಿ ಮತ್ತು ಸಾಮಾಜಿಕ ಸಮಾನತೆಗಾಗಿ ನೀಡಿದ ಕೊಡುಗೆ ಅಪಾರ. ಅವರ ತತ್ತ್ವ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ತಿಳಿಸಿದರು.

​ಈ ಜಯಂತಿ ಉತ್ಸವದಲ್ಲಿ ಗ್ರಾಮದ ಅನೇಕ ಮುಖಂಡರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬಸ್ಸಯ್ಯ ಮುತ್ಯಾ, ಬುದ್ಯಾಪ್ಪ ಗೌಡ, ರಾಚನ ಗೌಡ ಪೊಲೀಸ್ ಪಾಟೀಲ್, ಅಂಬ್ರೆಷ್ ಗೌಡ, ನಾಗರಾಜ್ ಗೌಡ.
​ಗ್ರಾಮ ಮುಖಂಡರು: ಮರೆಪ್ಪ ತೋಟದ್, ಸಣ್ಣ ಸೈದಪ್ಪ ರಾಮದುರ್ಗ, ಬಸವರಾಜ್ ಗಬ್ಬುರ್, ದೊಡ್ಡ ಸೈದಣ್ಣ ರಾಮದುರ್ಗ, ನರಸಪ್ಪ. ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀನಿವಾಸ್ ಕಲಾಲ್, ಮರೆಣ್ಣ ಹಂಪಯ್ಯನೋರ್, ಶಿವಣ್ಣ ಅಂಗಡಿ, ಸಂಗಪ್ಪ ವರಮನಿ, ಬಸವಣ್ಣ, ಮರೆಣ್ಣ ನಾಯಕೋಡಿ, ಸದಾಶಿವ ದೊರೆ, ಮಹಾದೇವಪ್ಪ ವಿಶ್ವಕರ್ಮ, ಮರೆಪ್ಪ ಮೇತ್ರೆ, ಮರೆಪ್ಪ ಸಕ್ರೆ, ಶಿವು ಬಂಡಾರಿ, ಮಹೇಶ ಪೂಜಾರಿ ಸೇರಿದಂತೆ ಗ್ರಾಮದ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku