
ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ರಾಜಕೀಯ ಮುನ್ನಲೆಯಲ್ಲಿ ಶರಣಪ್ಪ ಮಾನೇಗಾರ ಅವರ ಹೆಸರು ಇಂದು ಹೊಸ ಆಶಯವಾಗಿ ಕೇಳಿಬರುತ್ತಿದೆ. ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಲು ಸನ್ನದ್ಧರಾಗಿದ್ದಾರೆ.
ಶ್ರಮಜೀವಿ ಉದ್ಯಮಿಯಿಂದ ಜನನಾಯಕನತ್ತ ಎಸ್.ಡಿ.ಎಮ್ ಪಯಣ
ಗುರುಮಿಠಕಲ್ ಮಣ್ಣಿನ ಮಗನಾಗಿ, ಕೇವಲ ಒಬ್ಬ ಉದ್ಯಮಿಯಾಗಿ ಉಳಿಯದೆ, ಜನರ ಧ್ವನಿಯಾಗಲು ಹೊರಟಿರುವ ವ್ಯಕ್ತಿತ್ವವೇ ಶರಣಪ್ಪ ಮಾನೇಗಾರ ಇವರು ಶ್ರೀಮಂತಿಕೆಯ ಹಿನ್ನೆಲೆಯಿಂದ ಬಂದವರಲ್ಲ; ಬೆವರು ಸುರಿಸಿ, ಸ್ವಂತ ಪರಿಶ್ರಮದಿಂದ ಉದ್ಯಮ ಕಟ್ಟಿದವರು. “ಹಣಕ್ಕಿಂತ ಜನರ ನಂಬಿಕೆಯೇ ದೊಡ್ಡ ಆಸ್ತಿ” ಎಂದು ನಂಬಿರುವ ಇವರು, ಇಂದು ಕ್ಷೇತ್ರದ ಸಂಘಟನೆಯ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ.
ಯುವ ನಾಯಕತ್ವದ ಹೊಸ ಭರವಸೆ
ಹಳೆಯ ರಾಜಕೀಯ ಶೈಲಿಗಿಂತ ಭಿನ್ನವಾಗಿ, ಯುವಶಕ್ತಿಯನ್ನು ಒಗ್ಗೂಡಿಸಿ ಹೊಸ ಬದಲಾವಣೆ ತರುವ ಛಲ ಇವರದ್ದು. ಗುರುಮಿಠಕಲ್ ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗ, ಶಿಕ್ಷಣ ಮತ್ತು ಅವಕಾಶಗಳ ವೇದಿಕೆ ನಿರ್ಮಿಸುವುದು ಇವರ ದೂರದೃಷ್ಟಿ. ಕೇವಲ ಭಾಷಣಕ್ಕೆ ಸೀಮಿತವಾಗದೆ, ಪಕ್ಷವನ್ನು ತಳಮಟ್ಟದಿಂದ ಬಲಪಡಿಸುತ್ತಾ “ಬದಲಾವಣೆಯ ರೂವಾರಿ” ಎನಿಸಿಕೊಂಡಿದ್ದಾರೆ.
ಹಿಂದುಳಿದ ವರ್ಗಗಳ ಗಟ್ಟಿ ಧ್ವನಿ
ಕ್ಷೇತ್ರದಲ್ಲಿ “ಹಿಂದುಳಿದ ವರ್ಗದ ನಾಯಕ” ಎಂಬ ಟ್ಯಾಗ್ ಲೈನ್‌ನೊಂದಿಗೆ ಮುನ್ನಡೆಯುತ್ತಿರುವ ಇವರು, ಸಾಮಾಜಿಕ ನ್ಯಾಯಕ್ಕಾಗಿ ತುಡಿಯುತ್ತಿರುವವರು. ಶೋಷಿತರ, ಕಾರ್ಮಿಕರ ಮತ್ತು ರೈತ ವರ್ಗದ ಹಿತ ಕಾಪಾಡುವುದು ಇವರ ಪ್ರಮುಖ ಆದ್ಯತೆ. ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಗೌರವ ಸಿಗಬೇಕೆಂಬ ಉದ್ದೇಶದಿಂದ ಜನಸಾಮಾನ್ಯರ ಜೊತೆ ಬೆರೆತು ಕೆಲಸ ಮಾಡುತ್ತಿದ್ದಾರೆ.
ಸಂಘಟನಾ ಚತುರ
ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ, ಪ್ರತಿಯೊಂದು ಹಳ್ಳಿಯ ಜನರ ಸಮಸ್ಯೆಗಳನ್ನು ಆಲಿಸುತ್ತಾ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನೂ ಪ್ರೀತಿಯಿಂದ ನಡೆಸಿಕೊಳ್ಳುವ ಗುಣ ಇವರನ್ನು ಒಬ್ಬ ನೈಜ “ಸಂಘಟನಾ ಚತುರ”ನನ್ನಾಗಿಮಾಡುತ್ತಿದೆ.
–ದೇವರಾಜ್ ಪಾಟೀಲ್ ಕಣೇಕಲ್










Leave a Reply