
ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ – ಶಾಸಕ ತುನ್ನೂರ ಸೂಚನೆ
ಯಾದಗಿರಿ : ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ವ್ಯವಸ್ಥೆ ಮಾಡಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ವಾರ್ಡ ನಂ. 30 ರ ಹೊಸ ಬಸ್ ನಿಲ್ದಾದ ಎದುರಿಗಿನ ಅನ್ಸಾರ್ ಹೋಟೆಲ್ ದಿಂದ ಕೆಇಬಿ ಬಾಬಾ ಮನೆಯವರೆಗೆ 60 ಲಕ್ಷ ರೂ. ಅನುದಾನದಲ್ಲಿ ಕೈಗೊಳ್ಳುತ್ತಿರುವ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣದ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗುಣಮಟ್ಟದಲ್ಲಿ ಕೆಲಸ ಮಾಡಬೇಕೆಂದ ಅವರು, ನಗರದ ವಿವಿಧ ವಾರ್ಡಗಳಲ್ಲಿನ ರಸ್ತೆ ಮತ್ತು ಚರಂಡಿ ನಿರ್ಮಾಣದ ಕಾರ್ಯ ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದೆಂದರು.
ನಿರ್ಮಿತಿ ಕೇಂದ್ರದಿಂದ ಈ ಕಾಮಗಾರಿ ನಡೆಯುತ್ತಿದ್ದು, ಕೆಲಸ ಮುಗಿಯುವವರೆಗೂ ಜನರ ಸಂಚಾರ ತೊಂದರೆಯಾಗುತ್ತದೆ.ಆದರೂ ಸಾರ್ವಜನಿಕರು ಸಹಕರಿಸಬೇಕೆಂದು ಶಾಸಕರು ಹೇಳಿದರು. ಪೌರಾಯುಕ್ತ ಉಮೇಶ ಚವ್ಹಾಣ, ಗಣೇಶ ದುಪ್ಪಲ್ಲಿ, ಚನ್ನಕೇಶವ ಬಾಣತಿಹಾಳ,ಮಲ್ಲಿಕಾರ್ಜುನ ಈಟೆ, ಸುರೇಶ ಮಡ್ಡಿ,ತಿಮ್ಮಣ್ಣ ನಾಯಕ, ಸೋಮು ಮಸಕನಳ್ಳಿ,ಸಾಬಣ್ಣ ಬಾಡಿಯಾಳ,ಬೀರಲಿಂಗ,ಶಿವು ಬೆಳಗುಂದಿ,ಪ್ರಭಾಕರ. ಜಿ, ಇಂಜಿನಿಯರ ರವಿಕುಮಾರ ಸೇರಿದಂತೆಯೆ ಇತರರಿದ್ದರು.










Leave a Reply