
ಯಾದಗಿರಿ : ಏಪ್ರೀಲ್ ೧೧ರಂದು ಸುಕ್ಷೇತ್ರ ಸೂಗೂರು ಎನ್ ಶ್ರೀ ಭೋಜಲಿಂಗೇಶ್ವರರ ದೇವಸ್ಥಾನ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮನ ಹಿನ್ನಲೆ ದೇವಸ್ಥಾನದ ಆವರಣದಲ್ಲಿ ಅದ್ದೂರಿ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ವೇದಿಕೆ ಇನ್ನೀತರ ಕಾರ್ಯಗಳನ್ನು ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಹಿರಗಪ್ಪ ತಾತನವರು ಪರಿಶೀಲಿಸಿದರು.
ಇದೇ ವೇಳೆ ಮಾತನಾಡಿದ ಶ್ರೀಗಳು,
ಚಿತ್ತಾಪೂರ ತಾಲೂಕಿನ ಸುಕ್ಷೇತ್ರ ಸೂಗೂರು ಎನ್ ಶ್ರೀ ಭೋಜಲಿಂಗೇಶ್ವರರ ದೇವಸ್ಥಾನ ಉದ್ಘಾಟನೆ ಮತ್ತು ಬೆಳ್ಳಿ ರಥೋತ್ಸವ ಲೋಕಾರ್ಪಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಪ್ರೀಲ್ ೧೧ ರಂದು ಮಧ್ಯಾಹ್ನ ೧೨-೩೦ಕ್ಕೆ ಆಗಮಿಸಲಿದ್ದು, ಅವರ ಜೊತೆಗೆ ನಾಡಿನ ಹಲವು ಮಠಾಧೀಶರು ಮತ್ತು ಹಲವು ಸಚಿವರು ಸೇರಿದಂತೆ ರಾಜಕೀಯ ಗಣ್ಯರು ಭಾಗವಹಿಸಲಿದ್ದು, ಸ್ಥಳೀಯ ಶಾಸಕರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರೀಯಾಂಕ್ ಖರ್ಗೆಯವರು ಅಧ್ಯಕ್ಷತೆವಹಿಸಲಿದ್ದಾರೆ ಎಂದು ತಿಳಿಸಿದರು.
ಶ್ರೀ ಭೋಜಲಿಂಗೇಶ್ವರರ ದೇವಸ್ಥಾನ ಉದ್ಘಾಟನೆ, ಬೆಳ್ಳಿ ರಥೋತ್ಸವ ಲೋಕಾರ್ಪಣೆ, ಕಲ್ಯಾಣ ಮಂಟಪ ಲೋಕಾರ್ಪಣೆ ಸೇರಿದಂತೆ ಏಪ್ರೀಲ್ ೮ರಿಂದ ೧೧ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಸುಕ್ಷೇತ್ರ ಸೂಗೂರು ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಹಿರಗಪ್ಪ ತಾತನವರು ಸಾನ್ನಿಧ್ಯವಹಿಸಲಿದ್ದಾರೆ ಎಂದರು.
ಏಪ್ರೀಲ್ ೧೧ರಂದು ನಡೆಯುವ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವರಾದ ಭೈರತಿ ಸುರೇಶರವರು ಬೆಳ್ಳಿ ರಥದ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿಸಲಿದ್ದು, ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರಡ್ಡಿಯವರು ಕಲ್ಯಾಣ ಮಂಟಪ ಉದ್ಘಾಟನೆ ಮಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸ್ಸಪ್ಪಗೌಡ ದರ್ಶನಾಪೂರ, ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಜಮೀರ್ ಅಹ್ಮದ್‌ಖಾನ್, ಕಲಬುರಗಿ ಸಂಸದರಾದ ರಾಧಾಕೃಷ್ಣ ದೊಡ್ಮನಿ, ರಾಯಚೂರು ಸಂಸದರಾದ ಜಿ.ಕುಮಾರ ನಾಯಕ, ಅತಿಥಿಗಳಾಗಿ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ.ಅಜಯ ಸಿಂಗ್, ಶಾಸಕರಾದ ಬಿ.ಆರ್.ಪಾಟೀಲ, ಎಂ.ವೈ.ಪಾಟೀಲ, ಅಲ್ಲಮ ಪ್ರಭು ಪಾಟೀಲ, ಖನೀಜಾ ಪಾತೀಮಾ, ಚನ್ನಾರಡ್ಡಿ ತುನ್ನೂರ, ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲ ನಾಯಕ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ್, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಬಿ.ಜಿ.ಪಾಟೀಲ, ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ.ರಾಮಚAದ್ರಪ್ಪ, ಉದ್ಯಮಿಗಳಾದ ಲಿಂಗಾರಡ್ಡಿ ಬಾಸರಡ್ಡಿ, ಅಹಿಂದ ಮುಖಂಡರಾದ ಹಣಮೇಗೌಡ ಬೀರನಕಲ್ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಏಪ್ರೀಲ್ ೮ರಂದು ಬುಧವಾರ ಬೆಳಗ್ಗೆ ಶ್ರೀ ಭೋಜಲಿಂಗೇಶ್ವರರ ಶಿಲಾಮೂರ್ತಿಯ ಜಲಾಧಿವಾಸ, ಧಾನ್ಯಾಧಿವಾಸ ಕಾರ್ಯಕ್ರಮ ನಡೆಯಲಿದ್ದು, ಏಪ್ರೀಲ್ ೯ರಂದು ಬೆಳಗ್ಗೆ ಶ್ರೀ ಭೋಜಲಿಂಗೇಶ್ವರರ ಶಿಲಾಮೂರ್ತಿಯ ಕ್ಷೀರಾಧಿವಾಸ, ಪುಷ್ಪಾಧಿವಾಸ, ಶಯನಾಧಿವಾಸ ಕಾರ್ಯಕ್ರಮ ನಡೆಯಲಿದೆ, ಏಪ್ರೀಲ್ ೧೦ರಂದು ಶುಕ್ರವಾರ ಬೆಳಗ್ಗೆ ಶ್ರೀ ಭೋಜಲಿಂಗೇಶ್ವರರ ಶಿಲಾಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಭೋಜಲಿಂಗೇಶ್ವರರ ದರ್ಶನ ಪಡೆದು ಪುನಿತರಾಗಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಈರಣ್ಣ ಬಲಕಲ್, ಬಸವರಾಜ ಪಾಟೀಲ, ಶರಣಗೌಡ, ಭೀಮರಡ್ಡಿ ಕುರಿಹಾಳ, ಸಂಗಣ್ಣಗೌಡ, ಸಿದ್ದುಗೌಡ, ಮಲ್ಲಪ್ಪ ಅರಿಕೇರಿ, ಮಲ್ಲಯ್ಯ ಕಸಬಿ, ವಿಶ್ವನಾಥಯ್ಯಸ್ವಾಮಿ ಚತುರಾಚಾರ್ಯಮಠ, ಪ್ರಭು ಹೂಗಾರ ಉಪಸ್ಥಿತರಿದ್ದರು.
ಭಕ್ತರ ಏಳ್ಗೆಗಾಗಿ ಸದಾ ಶ್ರೀಮಠ : ಭಕ್ತರೋದ್ಧಾರಕ ಶ್ರೀ ಭೋಜಲಿಂಗೇಶ್ವರ ಶರಣರು
ಭವದ ಭಕ್ತರ ಕಳೆ-ಕಳೆಯುವ ಭಗವಂತ “ ಶ್ರೀ ಹಿರಗಪ್ಪ ತಾತ ”
“ಧರ್ಮದಷ್ಟೇ ಮುಖ್ಯವಾದುದು ಶಿಕ್ಷಣ” ಎಂಬ ಧೈಯದೊಂದಿಗೆ ಸಾಮಾಜಿಕವಾಗಿ, ಭೌತಿಕವಾಗಿ, ಆರ್ಥಿಕವಾಗಿ ಹೀಗೆ ಎಲ್ಲಾ ರಂಗಗಳಲ್ಲಿಯೂ ಬದಲಾವಣೆ ತರಬೇಕೆಂದರೆ, ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ತಮ್ಮ ಕಲ್ಪನೆಯ ಬೀಜವನ್ನು ಅನುಷ್ಠಾನಕ್ಕೆ ತರುವ ಮೂಲಕ ಅದನ್ನು ಸಸಿಯಾಗಿಸಿ, ಗಿಡವಾಗಿಸಿ, ದೊಡ್ಡ ಆಲದ ಮರವನ್ನಾಗಿಸುವ ಪ್ರಯತ್ನದಲ್ಲಿ ಶ್ರೀ ಹಿರಗಪ್ಪತಾತನವರು ಪ್ರಯತ್ನಿಸುತ್ತಿದ್ದಾರೆ.
ಶ್ರೀಗಳು ಅವರ ಗುರುಗಳಾದ ಶ್ರೀ ಭೋಜಲಿಂಗೇಶ್ವರರು ಹಾಕಿಕೊಟ್ಟ ಮಾರ್ಗವನ್ನು ಸಂರಕ್ಷಿಸುತ್ತಾ, ಬೆಳೆಸುತ್ತಾ, ಅನೇಕ ಕಾರ್ಯಕ್ರಮಗಳ ಮೂಲಕ ಇನ್ನೂ ಉನ್ನತ ಮಟ್ಟಕ್ಕೆ ಸಂಸ್ಥಾನ ಮಠವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
ಸರ್ವಧರ್ಮಗಳನ್ನೂ ಮತ್ತು ಸರ್ವಧರ್ಮಿಯರನ್ನು ಸಮಾನವಾಗಿ ಮತ್ತು ಗೌರವಯುತವಾಗಿ ಕಾಣುವುದು ನಮ್ಮ ಶ್ರೀಮಠದ ಉದ್ದೇಶ. ಅದಕ್ಕೆ ಉದಾಹರಣೆ ಎಂಬAತೆ, ಇಲ್ಲಿ ಹಿಂದು ಮುಸ್ಲೀಂ ಭಾವೈಕ್ಯತೆಯ ತಾಣವಾಗಿದ್ದು, ದೇವಿ ಪೂಜೆಯ ನಂತ ಶ್ರೀ ಭೋಜಲಿಂಗೇಶ್ವರ ಶರಣರ ಜೊತೆ ಮುಸ್ಲೀಂ ಧರ್ಮಗುರುಗಳಿಗೂ ಇಲ್ಲಿ ಪೂಜೆ ಸಲ್ಲುತ್ತದೆ. ಹಿಂದು ಮುಸ್ಲೀಂ ಕ್ರೆöÊಸ್ತರೆಲ್ಲರೂ ಒಂದೇ ಭಾರತ ಮಂದಿರ ಎನ್ನುವ ವಾಣಿಯಂತೆ ನಮ್ಮ ಮಠ ಈ ಭಾಗದಲ್ಲಿ ಯಾವುದೇ ಜಾತಿ, ಧರ್ಮ, ಪಂಥಕ್ಕೆ ಸೀಮಿತವಾಗದೇ ಸರ್ವ ಭಕ್ತಾದಿಗಳ ಶ್ರೇಯಸ್ಸಿಗಾಗಿ ಶ್ರಮಿಸುತ್ತಿದೆ ಎನ್ನುತ್ತಾರೆ ಪೀಠಾಧಿಪತಿಗಳಾದ ಶ್ರೀ ಹಿರಗಪ್ಪ ತಾತನವರು.
ದುಖಃವನ್ನು ನಿವಾರಿಸುವ ಮಾತೆಯಂತೆ ರೋಗವನ್ನು ತೊಲಗಿಸುವ ವೈದ್ಯರಂತೆ ಕರ್ತವ್ಯ ನಿರತ ತಂದೆಯAತೆ ಅಜ್ಞಾನವನ್ನು ತೊಲಗಿಸುವ ಗುರುವನಂತೆ ಶ್ರೀ ಭೋಜಲಿಂಗೇಶ್ವರ ಮಠದ ಪೀಠಾಧಿತಿ ಶ್ರೀ ಹಿರಗಪ್ಪ ತಾತನವರು ಕಾರ್ಯನಿರ್ವಹಿಸುತ್ತಿದ್ದಾರೆ.ಆಧುನಿಕ ಕಾಲದಲ್ಲಿ ಭಕ್ತರ ಎದುರಿನಲ್ಲಿಯೇ ಅನೇಕ ಪವಾಡಗಳನ್ನು ಮಾಡಿದ ಪುಣ್ಯಪುರುಷರಾದ ಶ್ರೀ ಹಿರಗಪ್ಪ ತಾತನವರು ಶ್ರೀ ಭೋಜಲಿಂಗೇಶ್ವರರ ಭವ್ಯ ಶಿಲಾಮಂದಿರದ ಕೆಲಸವನ್ನು ಕೈಗೊಂಡ ಕಾಯಕಯೋಗಿಯಾಗಿದ್ದಾರೆ. ಪೂಜ್ಯರು ಶಿಕ್ಷಣ ವಸತಿ ಅನ್ನ, ಕೃಷಿ ಹೀಗೆ ಚತುರ್ಥ ಕಾಯಕದ ಸಲುವಾಗಿ ತಮ್ಮ ಕಾಯವನ್ನು ಸವಿಸುತ್ತಿದ್ದಾರೆ. ಅಷ್ಟೇಅಲ್ಲದೇ ಭಕ್ತರ ನೋವನ್ನುಂಡ ಸಂತರAತೆ ನಡೆದಾಡುವ ಶರಣರಾಗಿ ಜೀವಿಸುತ್ತಿದ್ದಾರೆ.
ಶ್ರೀ ಮಠದ ಉದ್ದಾರಕ್ಕಾಗಿ ಹಾಗೂ ಭಕ್ತರ ಏಳಿಗೆಗಾಗಿ ಸದಾ ತಮ್ಮ ದೇಹವನ್ನು ಗಂದದ ಕೊರಡಿನಂತೆ ಸವಿಸುತ್ತಾ ಬಂದವರಾಗಿದ್ದಾರೆ. ವೈಭವಪೂರಿತವಾದ ಜೀವನವನ್ನು ಬಯಸಿದವರಲ್ಲ ಸಾಮಾನ್ಯ ಶರಣರಂತೆ ಇದ್ದಾರೆ ಎನ್ನುವುದು ವಿಶೇಷವಾಗಿದೆ.
ಶ್ರೀ ಭೋಜಲಿಂಗೇಶ್ವರ ಶರಣ ಚರಿತೆ :
ನಮ್ಮ ಕರುನಾಡಿನಲ್ಲಿ ಅನೇಕ ಶರಣ ಸಂತರು ತಪಸ್ ಮಾಡಿ ಆ ತಪಸ್ಸಿನ ಫಲವನ್ನು ಭಕ್ತರಿಗೆ ಧಾರೆ ಎರೆದು ಅವರ ಜೀವನವನ್ನು ಪಾವನ ಮಾಡಿದ ಶರಣರನ್ನು ಕಾಣುತ್ತೇವೆ ಅಂತಹ ಶರಣರ ಕಲಿಯುಗದಲ್ಲಿ ಆಗಿ ಹೋದ ಮಹಾ ಶಿವಯೋಗಿ ಸೂಗೂರ(ಎನ್) ಎಂಬ ಪುಟ್ಟ ಗ್ರಾಮದಲ್ಲಿ ನಂಬಿ ಬಂದ ಭಕ್ತರ ಕರುಣಾನಿಧಿ ಭೋಜಲಿಂಗೇಶ್ವರರು ಯಾವುದೇ ಫಲಾಪೇಕ್ಷವಿಲ್ಲದೆ ಭಕ್ತರ ಜೀನಾಡಿಯಾಗಿ ಸೂರ್ಯಚಂದ್ರರಷ್ಟು ಪ್ರಕಾಶಮಾನವಾಗಿ ಕಿರಣವನ್ನು ಸೂಸಿ ನೋವನ್ನು ಬಣ್ಣಿಸಿ ನಲಿವನ್ನು ಉಂಟು ಮಾಢಿದ ಕಲಿಯುಗದ ಕೊನೆಯ ಗಂಡನಾಗಿ ಮೆರೆದು ಹೋದ ಶರಣರಾಗಿದ್ದಾರೆ.
ಶ್ರೀ ಭೋಜಲಿಂಗೇಶ್ವರರೆAಬ ಮಹಾಶರಣರು ಸೂಗೂರು ಎನ್ ಗ್ರಾಮದಲ್ಲಿ ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿ ಭಕ್ತರ ಜೀವನವನ್ನು ಉದ್ದರಿಸಿದ ಉದ್ಧಾರಕರು, ಯಾವುದನ್ನು ಬಯಸದೇ ನಿರಾಡಂಬರ ಜೀವನವನ್ನು ನಡೆಸಿ ಶರಣರಲ್ಲೇ ಮಹಾಶರಣರಾಗಿ ಜೀವಿಸಿದ್ದರು.
ಭಕ್ತರಿದ್ದಲ್ಲಿಗೆ ಹೋಗಿ ಭವ ರೋಗಗಳನ್ನು ಹಾಗೂ ಭೂತ ಪ್ರೇತಗಳನ್ನು ಅಂಗವೈಕಲ್ಯತೆಯನ್ನು ತೊಲಗಿಸಿ ಈ ಭುವನದ ಭುವನೇಶ್ವರರಾಗಿ ಭಕ್ತರ ಭಾವದಲ್ಲಿ ಅಚ್ಛಳಿಯದೆ ನಿಂತವರು.
ಪ್ರಸ್ತುತ ಸನ್ನವೇಶದಲ್ಲೂ ಸ್ಮರಿಸುವವರ ಕನಸಿನಲ್ಲಿ ಕಂಡು ಕಷ್ಟವನ್ನು ನಿವಾರಿಸುವವರು ಯಾವ ಗುರುವನ್ನು ಪಡೆಯದೆ ಸ್ವಯಂ ಸಿದ್ಧಿಯನ್ನು ಪಡೆದವರು ಹಾಗೂ ತಮ್ಮ ಅರಿವೇ ಗುರುವನ್ನಾಗಿ ಮಾಡಿಕೊಂಡವರು. ಸಾಮಾನ್ಯ ಅಸಾಮಾನ್ಯ ಮೇಲು ಕೀಳು ಎಂಬ ಭಾವನೆ ತೊರೆದು ಸರ್ವ ಧರ್ಮದವರನ್ನು ವಿಶ್ವಾಸಕ್ಕೆ ಹಾಗೂ ಅವರಿಂದ ಪೂಜಿತರಾಗಿ ಸರ್ವ ಧರ್ಮಗಳ ಸರ್ವೇಕನಾಗಿ ಸಕಲ ಇಷ್ಟಾರ್ಥವನ್ನು ಈಡೇರಿಸಿದ ನಿತ್ಯ ನಿರಂಜನ ಭೋಜಲಿಂಗೇಶ್ವರರು.
ದಾವಲ್ ಮಲ್ಲಿಕ್ ಅಂಬಾಭವಾನಿ, ಹರಿಹರಕ್, ರೋಷವಾಗಿ ಹಗಲು ರಾತ್ರಿ ಎನ್ನದೆ ಭಕ್ತರಿಗೆ ಭವಿಷ್ಯವನ್ನು ಹೇಳಿದವರು ಅನೇಕ ಭಕ್ತರನ್ನು ಮೃತ್ಯುವಿನಿಂದ ಪಾರು ಮಾಡಿದ ಮೃತ್ಯಂಜಯನ ರೂಪವಾಗಿ ಧರೆಯಲ್ಲಿ ಮೆರೆದ ಹೋದವರು, ಹಾವನ್ನು ಹಗ್ಗವನ್ನಾಗಿ ಮಾಡಿದವರು, ಚಲಿಸುವ ರೈಲು ನಿಲ್ಲಿಸಿದವರು, ಹುಚ್ಚನ್ನು ನಿಚ್ಚಳ ಮಾಡಿದವರು, ಸುಟ್ಟ ಗಾಯವನ್ನು ಮಾಯ ಮಾಡಿದವರು ಹೀಗೆ ಅನೇಕ ಪವಾಡಗಳನ್ನು ಮಾಡುತ್ತ ಕುರಿಕಾಯುವ ಕಾಯಕವನ್ನು ಕೈಗೊಂಡು ಭಕ್ತರ ಸಹ ಕಷ್ಟ ಕಾರ್ಪಣ್ಯಗಳನ್ನು ಕಳೆದ ಅಮರೇಶ್ವವರರು.
ಹೀಗೆ ಜೀವಿತ ಕಾಲದಲ್ಲಿ ಅನೇಕ ಪವಾಡಗಳನ್ನು ಮಾಡುತ್ತ ಅಲೆಯುವುದು ಕಾಯ ಉಳಿಯುವುದು ಕಾರ್ಯ ಎನ್ನುವಂತೆ ಕಾಐಕದಲ್ಲಿಯೇ ಕೈಲಾಸವನ್ನು ಕಂಡವರಾಗಿದ್ದಾರೆ. ಅವರು ಮಾಡಿದ ಪವಾಡಗಳನ್ನು ಜಗದಗಲ-ಮುಗಿದಗಲ ಹೇಳಲಿಕ್ಕೆ ಅಸಾಧ್ಯವಾದಂತವುಗಳಾಗಿವೆ.
ಮಹಾ ಶರಣರು ೧೯೯೨ರಲ್ಲಿ ಶಿವರಾತ್ರಿಯ ನಂತರದ ಐದನೇ ದಿನದಲ್ಲಿ ಶಿವನಲ್ಲಿ ಲೀನವಾದ ಅವರು ಇಂದಿಗೂ ನಿತ್ಯ ನಿರಂಜನರಾಗಿದ್ದಾರೆ.. ಅವರ ಮಾರ್ಗದರ್ಶನದಲ್ಲಿ ಸುಪುತ್ರರಾದ ಶ್ರೀ ಶ್ರೀ ಶ್ರೀ ಹಿರಗಪ್ಪ ತಾತನವರು ಸಹ ಪವಾಡವನ್ನು ಮಾಡುತ್ತ ಭಕ್ತರ ಜೀವನವನ್ನು ಉದ್ಧರಿಸುವ ಉದ್ಧಾರಕರಾಗಿದ್ದಾರೆ. ಸುಕ್ಷೇತ್ರ ಕೀರ್ತಿಯನ್ನು ದಶದಿಕ್ಕುಗಳಲ್ಲಿ ಹರಡುವಂತೆ ಮಾಡಿದ್ದಾರೆ. ಮಠದ ಭಕ್ತರು ಆಂದ್ರ, ತೆಲಂಗಾಣ, ಮಹಾರಾಷ್ಟç ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ.
ಹಂತಿ ಸಂಪ್ರದಾಯಕ್ಕೆ ನಾಂದಿ:
ಇದು ಯಂತ್ರಗಳ ಯುಗ. ಏನಿದ್ದರೂ ಫಟಾಫಟ್ ಕೆಲಸ ಮುಗಿಯಬೇಕು ಎನ್ನುವ ಧೋರಣೆ ಎಲ್ಲರಲ್ಲೂ ಬೆಳೆಯುತ್ತಿದೆ. ಇದಕ್ಕೆ ರೈತರು ಹೊಲದಲ್ಲಿ ಕೈಗೊಳ್ಳುವ ರಾಶಿಯೂ ಹೊರತಾಗಿಲ್ಲ. ಆಧುನಿಕ ಯಂತ್ರಗಳ ಭರಾಟೆಯಲ್ಲಿ ರಾಶಿ ಕೆಲವೇ ಕ್ಷಣಗಳಲ್ಲಿ ಮುಗಿದು ಬಿಡುತ್ತದೆ. ಇಂತಹ ಸಂದರ್ಭದಲ್ಲಿಯೂ ಕೂಡ ಸೂಗೂರು ಎನ್ ಗ್ರಾಮದಲ್ಲಿ ಶ್ರೀ ಭೋಜಲಿಂಗೇಶ್ವರ ಶ್ರೀಮಠದ ಪೀಠಾಧಿಪತಿ ಹಿರಗಪ್ಪ ತಾತನವರು ಆ ಸಂಪ್ರದಾಯವನ್ನು ಜೀವಂತವಿಡಲು ಪ್ರಯತ್ನಿಸುತ್ತಾ ರೈತನ ಜೀವನಾಡಿಯಾಗಿರುವ ಜೋಡೆತ್ತುಗಳೊಂದಿಗೆ ಜೋಳದ ರಾಶಿಯ ಹಂತಿ ಸಂಪ್ರದಾಯವನ್ನು ಮುನ್ನಡೆಸುತ್ತಿರುವುದು ಕಲ್ಯಾಣ ಭಾಗದಲ್ಲಿ ಮಠ ಸಂಪ್ರದಾಯದಲ್ಲೇ ವಿಶೇಷವಾಗಿದೆ.
೧೦೦೮ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ : ಶ್ರೀ ಕುಮಾರ ಭೋಜರಾಜರ ಜನುಮದಿನದ ನಿಮಿತ್ತ ಸುಕ್ಷೇತ್ರ ಶ್ರೀ ಸೂಗೂರು ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರ ಶ್ರೀ ಮಠದಲ್ಲಿ ಕಳೆದ ಹಲವು ವರ್ಷಗಳಿಂದ ೧೦೦೮ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.










Leave a Reply