ಯಾದಗಿರಿ ಜಿಲ್ಲೆಯಲ್ಲಿ ತಜ್ಞ ವೈದ್ಯರು ಹಾಗೂ ವೈದ್ಯಾಧಿಕಾರಿಗಳ ನೇಮಕಾತಿ – ಅರ್ಜಿ ಆಹ್ವಾನ

Posted by


ಯಾದಗಿರಿ : ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರು ಹಾಗೂ ವೈದ್ಯಾಧಿಕಾರಿಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಬಿರಾದಾರ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ನಡೆಯುತ್ತಿದೆ. ಹುದ್ದೆಗಳ ವಿವರ ಹೀಗಿದೆ:
ಮಕ್ಕಳ ತಜ್ಞರು – 4 ಹುದ್ದೆಗಳು
ಅರವಳಿಕೆ ತಜ್ಞರು – 8 ಹುದ್ದೆಗಳು
ಪ್ರಸೂತಿ ತಜ್ಞರು – 8 ಹುದ್ದೆಗಳು
ಫಿಸಿಷಿಯನ್ (ಜಿ.ಎಂ) – 2 ಹುದ್ದೆಗಳು
ಹಿರಿಯ ವೈದ್ಯಾಧಿಕಾರಿ (MBBS) – 1 ಹುದ್ದೆ
ಸಾಮಾನ್ಯ ಕರ್ತವ್ಯ ವೈದ್ಯರು – 3 ಹುದ್ದೆಗಳು
ಕಿವಿ, ಮೂಗು ಮತ್ತು ಗಂಟಲು ತಜ್ಞರು – 1 ಹುದ್ದೆ
ಚರ್ಮ ರೋಗ ತಜ್ಞರು – 2 ಹುದ್ದೆಗಳು
ವೇತನ ವಿವರ:
ತಜ್ಞ ವೈದ್ಯರಿಗೆ ಪ್ರತಿ ತಿಂಗಳು ₹1,00,000
ವೈದ್ಯಾಧಿಕಾರಿಗೆ ಪ್ರತಿ ತಿಂಗಳು ₹60,000
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: ಏಪ್ರಿಲ್ 16, 2026
ನೇಮಕಾತಿ ಪ್ರಕ್ರಿಯೆ ವಾಕ್-ಇನ್ ಇಂಟರ್ವ್ಯೂ ಮೂಲಕ ನಡೆಯಲಿದೆ. ಹುದ್ದೆಗಳು ಭರ್ತಿಯಾಗದಿದ್ದಲ್ಲಿ ಪ್ರತಿ ಗುರುವಾರ ವಾಕ್-ಇನ್ ಇಂಟರ್ವ್ಯೂ ನಡೆಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 9449843067
📞 9008281552

Leave a Reply

Your email address will not be published. Required fields are marked *

Suddi Belaku