ನಾರಿ ಶಕ್ತಿ ಮಸೂದೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕ ಟೀಕೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ, ಏಪ್ರಿಲ್ 18 : ಭಾರತದ ನಾರಿಶಕ್ತಿ ಪ್ರಜಾಪ್ರಭುತ್ವದ ನಾಯಕತ್ವ ವಹಿಸುವುದನ್ನು ತಡೆಯುವ ಮೂಲಕ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ದೇಶಕ್ಕೆ ದ್ರೋಹ ಬಗೆದಿರುವುದಲ್ಲೇ ಇತಿಹಾಸವನ್ನು ಮರುಕಳಿಸುವಂತೆ ಮಾಡಿದೆ.

ದೇಶದ ಆಡಳಿತ ಹಾಗೂ ಶಾಸನ ರಚನಾ ಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಕಲ್ಪಿಸುವ ‘ನಾರಿ ಶಕ್ತಿ ವಂದನಾ’ ಐತಿಹಾಸಿಕ ಮಸೂದೆಯನ್ನು ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟ ಸೋಲಿಸಿದೆ. ದೇಶ ಈ ದಿನವನ್ನೆಂದೂ ಮರೆಯದು. ಭವ್ಯ ಭಾರತದ ಇತಿಹಾಸಕ್ಕೆ ಇದೊಂದು ಕರಾಳ ದಿನವಾಗಿ ಉಳಿಯಲಿದೆ.‌ ಮಹಿಳೆಯರ ಉನ್ನತಿಗೆ ಅಡ್ಡಗಾಲು ಹಾಕಿದ ವಿಪಕ್ಷಗಳನ್ನು ದೇಶದ 70 ಕೋಟಿ ನಾರಿಶಕ್ತಿ ಎಂದಿಗೂ ಕ್ಷಮಿಸದು.

ನಾರಿ ಶಕ್ತಿಯ ಸಬಲೀಕರಣಕ್ಕೆ ಬಿಜೆಪಿಯ ದೃಢ ಸಂಕಲ್ಪ ಒಂದೆಡೆಯಾದರೆ, ಮಹಿಳಾ ಮೀಸಲಾತಿ ಮಸೂದೆಗೆ ತಡೆಯೊಡ್ಡುವ ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟದ ವಿರೋಧ ಪಕ್ಷಗಳ ರಾಜಕೀಯ ಮತ್ತೊಂದೆಡೆಯಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರು ಯಾರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೋ, ಆ ‘ನಾರಿ ಶಕ್ತಿ’ಯ ಮುಂದೆ ಇಂದು ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟದ ಮಹಿಳಾ ವಿರೋಧಿ ಧೋರಣೆಯ ಮುಖವಾಡ ಬಯಲಾಗಿದೆ.

ಈ ಮೂಲಕ ಹೆಣ್ಣುಮಕ್ಕಳ ಭವಿಷ್ಯದ ಪರವಾಗಿ ನಿಂತವರು ಯಾರು ಮತ್ತು ತಮ್ಮ ಸ್ವಂತ ರಾಜಕೀಯ ಲಾಭಕ್ಕಾಗಿ ಮಹಿಳೆಯರ ಬೆನ್ನಿಗೆ ಚೂರಿ ಹಾಕಿದವರು ಯಾರು ಎಂಬುದನ್ನು ಇಡೀ ದೇಶವೇ ಗಮನಿಸುತ್ತಿದೆ.

You Might Also Like

Leave a Reply

Your email address will not be published. Required fields are marked *

Suddi Belaku