ಮಹಾರಾಣಾ ಪ್ರತಾಪ್ ಶೌರ್ಯ, ದೇಶಭಕ್ತಿಗೆ ಪ್ರತೀಕ: ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಮಹಾರಾಣಾ ಪ್ರತಾಪ್ ಸಿಂಹ ಅವರು ದೇಶ ಕಂಡ ಅತ್ಯಂತ ಬಲಿಷ್ಠ ಮತ್ತು ಶೂರ ರಾಜನಾಗಿದ್ದರೆಂದು ಬಣ್ಣಿಸಿರುವ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಅವರ ಜೀವನಾದರ್ಶಗಳನ್ನು ಪ್ರತಿಯೊಬ್ಬರು ಅನುಸರಿಸಬೇಕೆಂದರು.
ನಗರದ ಸಹ್ಯಾದ್ರಿ ಶಾಲೆಯಲ್ಲಿ ಜಿಲ್ಲಾ ರಜಪೂತ ಸಮಾಜ ಹಾಗೂ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ವೀರ ಶಿರೋಮಣಿ ಮಹಾರಾಣಾ ಪ್ರತಾಪ್ ಸಿಂಹ ರವರ 486ನೇ ಜಯಂತೋತ್ಸವ ಹಾಗೂ 2025–26ನೇ ಸಾಲಿನ ಎಸ್ಎಸ್ಎಲ್ ಸಿ, ಪಿಯುಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಪ್ಪಟ್ಟ ದೇಶಭಕ್ತರಾಗಿದ್ದ ಅವರು, ಸಮರ ಕಲೆಗಳು, ಕುದುರೆ ಸವಾರಿ ಮತ್ತು ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆದಿದ್ದರು. 1572 ರಲ್ಲಿ ತನ್ನ ತಂದೆಯ ಮರಣದ ನಂತರ, ಮಹಾರಾಣಾ ಪ್ರತಾಪ್ ಮೇವಾರ್ ರಾಜವಂಶದ 13 ನೇ ರಾಜರಾದರು. ಅವರು ತಮ್ಮ ಅವಧಿಯಲ್ಲಿ ಎದುರಾದ ಯುದ್ಧಗಳನ್ನು ಅತ್ಯಂತ ಧೈರ್ಯದಿಂದ ಎದುರಿಸಿದ ಕ್ರಾಂತಿಕಾರಿ ವ್ಯಕ್ತಿಯಾಗಿದ್ದರೆಂದು ಶಾಸಕರು ಬಣ್ಣಿಸಿದರು.
ರಜಪೂತ ಸಮಾಜ ಅತ್ಯಂತ ಶೂರ,ಧೀರರನ್ನು ಹೊಂದಿದೆ.

ತಮ್ಮ ಕಾಯಕದಡಿಯಲ್ಲಿಯೇ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಈ ಸಮಾಜ ಇಷ್ಟು ವಿದ್ಯಾರ್ಥಿಗಳು ಓದಿನಲ್ಲಿ‌ಸಾಧನೆ ಮಾಡಿದ್ದು ನೋಡಿ ಸಂತಸವಾಗಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ, ವಿದ್ಯೆಯಿಂದಲ್ಲೆ ಎಲ್ಲವೂ ಇದೆ. ಅವರು ಮಹಾನ್ ಸಾಧಕರಾಗಿ ದೇಶ ಕಟ್ಟುವಲ್ಲಿ ಶ್ರಮಿಸುತ್ತಾರೆ. ಜನ್ಮ ನೀಡಿದ ಪಾಲಕರ ಕೀರ್ತಿ ಹೆಚ್ಚಿಸುತ್ತಾರೆಂದು ಶಾಸಕರು ಕಿವಿ ಮಾತು ಹೇಳಿದರು.
ಸಮಾಜಕ್ಕೆ ನಿವೇಶನ,ಇತರೆ ಬೇಡಿಕೆಗಳ ಬಗ್ಗೆ ಸೂಕ್ತ ಭರವಸೆ ನೀಡಿದರು.

ಗಂಗಾವತಿ ರಜಪೂತ ಸಮಾಜದ ಮಹಿಳಾ ಮುಖಮಡರಾದ ಅನ್ನಪೂರ್ಣಸಿಂಗ್ ಮಾತನಾಡಿ, ರಜಪೂತ ಸಮಾಜ ವಿಶ್ವಾಸ,ನಂಬಿಕೆಗೆ ಮತ್ತು ಧೈರ್ಯಕ್ಕೆ ಹೆಸರುವಾಸಿಯಾಗಿರುವ ಸಮಾಜವಾಗಿದೆ ಎಂದರು.
ಅಪ್ಪಟ್ಟ ದೇಶಭಕ್ತರ ಸಮಾಜಗಳಲ್ಲಿ ರಜಪೂತ ಸಮಾಜವೂ ಒಂದಾಗಿದೆ. ಅಖಂಡ ಭಾರತದ ಉಳುವಿಗೆ ತ್ಯಾಗ, ಬಲಿದಾನ ನೀಡಿದ ಸಮಾಜ ಯಾವುದಾದರೂ ಇದ್ದರೇ ಅದು ರಜಪೂತ ಸಮಾಜವೆಂದು ಅವರು ವಿವರಿಸಿದರು.
ಈ ಸಮಾಜಕ್ಕೆ ಇಲ್ಲೊಂದು ಭವನ ನಿರ್ಮಾಣ ಮಾಡಲು ನಿವೇಶನದ ಅವಶ್ಯಕತೆ ಇದೆ. ಅದನ್ನು ಶಾಸಕರು ಒದಗಿಸಬೇಕೆಂದರು.

ಸಮಾಜದ ಮಕ್ಕಳು ಶಿಕ್ಷಣದಲ್ಲಿ‌ ಸಾಧನೆ ಮಾಡಿ ಇಂದು ಸನ್ಮಾನಿಸಿಕೊಂಡಿದ್ದು ಗಮನಿಸಿದರೇ ರಜಪೂತ ಸಮಾಜದಲ್ಲಿ‌ ಮುಂದೇ ಸಾವಿರಾರು ಪ್ರತಿಭೆಗಳು ಹೊರಬರುತ್ತವೆ ಎಂಬ ವಿಶ್ವಾಸ ಮೂಡಿದೆ ಎಂದು ಶ್ಲಾಘಿಸಿದರು.
ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ವೆಂಕಟ ಸಿಂಗ್ ರಾಯಚೂರ್ ಮಾತನಾಡಿ, ಎಲ್ಲ ಸಮಾಜಗಳ ಜನರೊಂದಿಗೆ ಪ್ರೀತಿ,ವಿಶ್ವಾಸದಿಂದ ನಡೆದುಕೊಳ್ಳವ ಸಮಾಜ ಇದಾಗಿದೆ.‌ಈ ಸಮಾಜಕ್ಕೆ ಬೇಕಾಗುವ ಸೌಲಭ್ಯಗಳನ್ನು ಸರ್ಕಾರ ನೀಡಬೇಕೆಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ಕಲಬುರಗಿ ಸರ್ಕಾರಿ, ಅರೆ ಸರ್ಕಾರಿ‌ ನೌಕರರ ಸಂಘದ ಅಧ್ಯಕ್ಷರಾದ ಶಿವರಾಜ್ ತಿವಾರಿ, ಯಾದಗಿರಿ ಜಿಲ್ಲಾ ಉಪಾಧ್ಯಕ್ಷರಾದ ಸತ್ಯನಾರಾಯಣ ಪ್ರಸಾದ್ ತಿವಾರಿ, ವಿಕ್ರಮ್ ಸಿಂಗ್ ಗೌತಮ್, ಸಂದೀಪ್ ಹಜಾರೆ, ಅಶೀಷ ಹಜಾರೆ, ರಾಹುಲ್ ಹಾಜರೆ, ಸೋಹನ್ ಪ್ರಸಾದ್, ಗಣೇಶ ಬಾಷ್ಕರ್, ರಾಜಾಸಿಂಗ್, ಅಮರ್ ಸಿಂಗ್, ವಿಠ್ಠಲಗ ಸಿಂಗ್, ಉದಯ ಸಿಂಗ್, ಭೀಮಸಿಂಗ್, ದಶರಥ ಸಿಂಗ್, ಮುನಿರಾಜ ಸಿಂಗ್, ಶಶಿಕಾಂತ ದಿಕ್ಷೀತ್, ಸತ್ಯಾರಾಯಾಣಸಿಂಗ್ ತಿವಾರಿ, ನಾಗೇಂದ್ರ ಸಿಂಗ್, ಅಮರಸಿಂಗ್ ಅಪಜಲ್ ಪೂರ್, ಹರಿಸಿಂಗ್, ಹರಿಸಿಂಗ್,‌ಲಕ್ಣ್ಮಣಸಿಂಗ್ ಸೇರಿದಂತೆ ಮತ್ತಿತರರು ಇದ್ದರು.
ಇದೇ ವೇಳೆ ಎಸ್ಎಸ್ಎಲ್ ಸಿ ಮತ್ತು ಪಿಯು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

Suddi Belaku