ಗುಡುಗು-ಮಿಂಚಿನೊಂದಿಗೆ ಮಳೆ: ಬಿಸಿಲಿನಿಂದ ಬಳಲಿದ ಜನರಿಗೆ ತಂಪಿನ ನಿರಾಳತೆ

Posted by

ಸುದ್ದಿ ಬೆಳಕು ವಾರ್ತೆ

ಗುರುಮಠಕಲ್ ಏಪ್ರಿಲ್ 21 : ಕಳೆದ ಹಲವು ದಿನಗಳಿಂದ ತೀವ್ರ ಬಿಸಿಲಿನ ಬೇಗೆಗೆ ತತ್ತರಿಸಿದ್ದ ಗುರುಮಠಕಲ್ ಜನತೆಗೆ ಮಂಗಳವಾರ ಸಂಜೆ ಗುಡುಗು-ಮಿಂಚಿನೊಂದಿಗೆ ಮಳೆ ಸುರಿದು ಪ್ರಕೃತಿ ತಂಪಿನ ಸ್ಪರ್ಶ ನೀಡಿತು. ಮಧ್ಯಾಹ್ನದ ವೇಳೆಗೆ 40 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ಉಷ್ಣಾಂಶ ದಾಖಲಾಗಿದ್ದು, ಜನರು ಮನೆಗಳಲ್ಲೇ ಸಿಲುಕುವಂತಾಗಿತ್ತು.

ಮಧ್ಯಾಹ್ನದ ವೇಳೆಯಲ್ಲಿ ಉಷ್ಣಾಂಶ ಏರಿಕೆಯಿಂದ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದರೆ, ಸಂಜೆ ಏಕಾಏಕಿ ಆಕಾಶ ಮೋಡಗಳಿಂದ ಆವರಿಸಿಕೊಂಡು ಗಾಳಿ ಜೋರಾಗಿ ಬೀಸತೊಡಗಿತು. ಕೆಲವೇ ಕ್ಷಣಗಳಲ್ಲಿ ಗುಡುಗು-ಮಿಂಚಿನೊಂದಿಗೆ ಮಳೆ ಸುರಿಯತೊಡಗಿದಾಗ ಬಿಸಿಲಿನಿಂದ ಬಳಲಿದ ಜನರು ಹರ್ಷ ವ್ಯಕ್ತಪಡಿಸಿದರು.
ಇದರಿಂದ ವಾತಾವರಣ ತಂಪಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಮಕ್ಕಳು ಮಳೆಯಲ್ಲಿ ಆಟವಾಡಿದರೆ, ಹಿರಿಯರು ಮನೆಗಳ ಮುಂದೆ ನಿಂತು ತಂಪಿನ ಗಾಳಿಯನ್ನು ಆನಂದಿಸಿದರು.
ಮಳೆ ಸುರಿದ ಪರಿಣಾಮ ವಾತಾವರಣದಲ್ಲಿ ತಕ್ಷಣವೇ ತಂಪು ಹರಡಿದ್ದು, ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಉಷ್ಣತೆಯ ಕಾಟ ಕಡಿಮೆಯಾಯಿತು. ಬಿಸಿಲಿನ ತಾಪದಿಂದ ಸಂಕಷ್ಟಕ್ಕೀಡಾಗಿದ್ದ ಜನತೆಗೆ ಈ ಮಳೆ ಸ್ವಲ್ಪ ಮಟ್ಟಿನ ಪರಿಹಾರ ನೀಡಿದಂತಾಗಿದೆ.

ಇಂತಹ ಮಳೆ ಇನ್ನೂ ಕೆಲವು ದಿನ ಮುಂದುವರಿದರೆ ಬಿಸಿಲಿನ ತೊಂದರೆ ಕಡಿಮೆಯಾಗುತ್ತದೆ” ಎಂದು ಸ್ಥಳೀಯರು ಅಭಿಪ್ರಾಯಪಟ್ಟರು

ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳಲ್ಲೂ ಇಂತಹ ಮಳೆಯ ಸಾಧ್ಯತೆ ಇದೆ ಎಂದು ಸೂಚಿಸಿದೆ.

Leave a Reply

Your email address will not be published. Required fields are marked *

Suddi Belaku