ಯಾದಗಿರಿಯಲ್ಲಿ ಹಿರಿಯ ನಾಗರಿಕರ ದಿನಾಚರಣೆ: ಹಿರಿಯರ ಪಾಲನೆ ಪ್ರತಿಯೊಬ್ಬರ ಕರ್ತವ್ಯ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ವಯಸ್ಸಾದ ನಮ್ಮ ಹಿರಿಯ ನಾಗರಿಕರ ಪಾಲನೆ ಪೊಷಣೆ ಪ್ರತಿಯೊಬ್ಬ ಮಕ್ಕಳ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಿಗಿ ಹೆಳಿದರು.ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ,ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ವಿವಿಧ ಇಲಾಖೆಯ ಸಂಯೋಗದಲ್ಲಿ ಗುರುವಾರ ದಂದು ಯಾದಗಿರಿ ನಗರದ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಹಿರಿಯ ನಾಗರಿಕರನ್ನು ಗೌರವಿಸಬೇಕು ಸಮಾಜಕ್ಕೆ ನಮ್ಮ ಹಿರಿಯ ಜಿವಿಗಳ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾಧಿಕಾರಿ ಶರಣಪ್ಪ ಪಾಟಿಲ್ ಕ್ಯಾತನಾಳ ಮಾತನಾಡಿದರು.

ಹಿರಿಯ ಜೀವಿಗಳ ಮನಸ್ಸು ಮಗುವಿನಂತದ್ದು ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಹಿರಿಯ ಜೀವಿಗಳ ಮನಸ್ಸನ್ನು ಯಾರು ನೋಯಿಸಬೆಡಿ ಅವಿಭಕ್ತ ಕುಟುಂಬದಲ್ಲಿರುವ ಪ್ರೀತಿ ವಿಶ್ವಾಸ ಎಲ್ಲೂ ಇಲ್ಲಾ ಮಕ್ಕಳು ತಂದೆ ತಾಯಿಗಳಿಗೆ ಪ್ರೀತಿ ವಿಶ್ವಾಸ ತೋರಿಸಿ ತಂದೆ ತಾಯಿಗಳ ಮನಸ್ಸು ಗೆಲ್ಲುವಂತೆ ಸಲಹೆ ನೀಡಿದರು.

ಪ್ರತಿಯೊಬ್ಬ ಮಕ್ಕಳು ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹಿರಿಯ ನಾಗರಿಕರಿಗೆ ಏನಾದರೂ ಸಮಸ್ಯೆ ಕಂಡು ಬಂದಲ್ಲಿ ನಮ್ಮ ಇಲಾಖೆಗೆ ಭೇಟಿ ನೀಡಿ ಮನವಿ ಸಲ್ಲಿಸಿ ನಿಮ್ಮ ಬೆಂಬಲಕ್ಕೆ ನಾವು ಸದಾ ಕಾಲ ಇರುವುದಾಗಿ ತಿಳಿಸಿದರು.ಇದೇ ಸಮಯದಲ್ಲಿ ಹಿರಿಯ ನಾಗರಿಕ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಸೂಕ್ತ ಪ್ರಶಸ್ತಿ ವಿತರಣೆ ಜೊತೆಗೆ ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ನಾಗರಿಕರಿಗೆ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಠಾಣೆ ಪಿಎಸ್ಐ ಮಂಜೆಗೌಡ,ಜಿಲ್ಲಾ ಅಂಗವಿಕಲರ ಡಿ.ಡಿ.ಆರ್.ಸಿ ಕೇಂದ್ರದ ಕಾರ್ಯದರ್ಶಿ ಅಜಿತ್ ಕುಮಾರ್,ನಿವೃತ್ತ ನೌಕರರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್ ತೂಮಕೂರ,ಸಿ.ಎಮ್ ಪಟ್ಟೆದಾರ,ಸೂರ್ಯಕಾಂತ್ ಕರದಳ್ಳಿ,ವಿಕಲಚೇತನರ ಹೋರಾಟ ಸಮಿತಿ ಮುಖಂಡ ಸಾಹೇನ್ ಜಾನಿ, ಹಾಗೂ ಜಿಲ್ಲಾ ನಿವೃತ್ತ ಸಂಘದ ಹಿರಿಯ ನಾಯಕರು ಸೇರಿದಂತೆ ಇಲಾಖೆ ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಜಿ.ಹಫೀಜ್ ಪಟೇಲ್ ನಿರೂಪಿಸಿದರು.ಶ್ರೀಮತಿ ಶಾಂತಾ.ಎನ್.ಜಡಿ.ಸ್ವಾಗತಿಸಿ ವಂದಿಸಿದರು

Leave a Reply

Your email address will not be published. Required fields are marked *

↑
Suddi Belaku