ಜಿಲ್ಲೆಯಲ್ಲಿ ಸಕಾಲದಲ್ಲಿ ಜನರಿಗೆ ಆಯುರ್ವೇದ ಚಿಕಿತ್ಸೆ ಸಿಗಲಿ : ಚೆನ್ನೂರ

Posted by

–

ಯಾದಗಿರಿ : ದೇಶದ ವೈಧ್ಯಕೀಯ ಪದ್ದತಿಗಳಲ್ಲಿ ಆಯುರ್ವೇದ ಚಿಕಿತ್ಸೆಗೆ ಹೆಚ್ಚಿನ ಮಹತ್ವವಿದೆ, ಪ್ರಸಕ್ತ ದಿನಗಳಲ್ಲಿ ಜನರು ಇದರ ಚಿಕಿತ್ಸೆ ಪಡೆಯಲು ಗಮನ ಹರಿಸುತ್ತಿದ್ದಾರೆ, ಸರ್ಕಾರದಿಂದ ಜಿಲ್ಲೆಯಲ್ಲಿ ಇನ್ನೂ ಹೆಚ್ಚು ಆಸ್ಪತ್ರೆಗಳನ್ನು ಆರಂಭಿಸಬೇಕು, ವೈದ್ಯರನ್ನು, ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಕ್ರೀಯಾಶೀಲರಾಗಬೇಕು, ಅಂದಾಗ ಮಾತ್ರ ಸಕಾಲದಲ್ಲಿ ಆಯುರ್ವೇದ ಚಿಕಿತ್ಸೆ ಜನರಿಗೆ ಸಿಗುವ ಮೂಲಕ ಸಹಕಾರಿಯಾಗಿ ಬದಲಾವಣೆಗೆ ಪ್ರೇರಣೆ ಸಿಗುತ್ತದೆ ಎಂದು ವಡಗೇರಾ ಜಿ.ಪಂ ಮಾಜಿ ಸದಸ್ಯ ಶ್ರೀನಿವಾಸರಡ್ಡಿ ಪಾಟೀಲ್ ಚೆನ್ನೂರ ಅಭಿಪ್ರಾಯಪಟ್ಟರು.

ಬುಧವಾರ ನಗರದ ಆಯುರ್ವೇದ ಜಿಲ್ಲಾಸ್ಪತ್ರೆಯಲ್ಲಿ ಎಷಿಯನ್ ನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಿಂದ ಆರೋಗ್ಯ ಕ್ಷೇತ್ರದಲ್ಲಿ ನೀಡುವ ಆಯುರ್‌ಭೂಷಣ ಪ್ರಶಸ್ತಿಗೆ ಭಾಜನರಾದ ಇಲ್ಲಿನ ಜಿಲ್ಲಾಸ್ಪತ್ರೆಯ ಹಿರಿಯ ವೈಧ್ಯರಾದ ಡಾ. ಪ್ರಮೋದ ಕುಲಕರ್ಣಿ ಅವರನ್ನು ಸನ್ಮಾನಿಸಿ, ಮಾತನಾಡಿದ ಅವರು, ಡಾ. ಕುಲಕರ್ಣಿಯವರು ಗಡಿಭಾಗದ ಮಾದ್ವಾರ ಆಯುರ್ವೇದ ಆಸ್ಪತ್ರೆಯಲ್ಲಿ ೩೦ ವರ್ಷಗಳ ಕಾಲ ಪ್ರಾಮಾಣಿಕವಾಗಿ, ಜನಸ್ನೇಹಿಯಾಗಿ, ಆಯುರ್ವೇದ ಚಿಕಿತ್ಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅದರ ಲಾಭವನ್ನು ಜನರಿಗೆ ತಲುಪಿಸಿ, ಸಮಾಜದಲ್ಲಿ ಬದಲಾವಣೆಗೆ ಯತ್ನಿಸಿದ್ದಾರೆ ಎಂದು ತಿಳಿಸಿದರು.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶರಣಪ್ಪಗೌಡ ಕೌಳೂರ ಮಾತನಾಡಿ, ಜಿಲ್ಲೆಯಲ್ಲಿ ಕೇವಲ ೨ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ, ೩ ಚಿಕಿತ್ಸಾಲಯಗಳಿವೆ, ಸರ್ಕಾರ ಇಲ್ಲಿಯೇ ಪಂಚಕರ್ಮ ಚಿಕಿತ್ಸೆ ರೋಗಿಗಳಿಗೆ ದೊರೆಯಲು ಅನುಕೂಲತೆ ಮಾಡಿಕೊಡಬೇಕು, ಅಂದಾಗ ಮಾತ್ರ ರೋಗಿಗಳು ಚಿಕಿತ್ಸೆ ಪಡೆಯಲು ದೂರದ ಧರ್ಮಸ್ಥಳ, ಹಾಸನ, ಮಂಗಳೂರ, ಉಡುಪಿ, ಬೆಂಗಳೂರು, ಸಾಂಗ್ಲಿ, ಮೀರಜ್ ಆಸ್ಪತ್ರೆಗಳಿಗೆ ಅಲೆದಾಟ ತಪ್ಪಿಸಲು ಸಾಧ್ಯ ಎಂದರು.

ಸನ್ಮಾನ ಸ್ವೀಕರಿಸಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಡಾ. ಪ್ರಮೋದ ಕುಲಕರ್ಣಿ, ನಮ್ಮ ಇಲಾಖೆಯಿಂದ ಈಗಾಗಲೇ ರಾಜ್ಯ ಸರ್ಕಾರಕ್ಕೆ ೫೦ ಬೆಡ್‌ಗಳ ಆಯುರ್ವೇದ ಜಿಲ್ಲಾಸ್ಪತ್ರೆ ನಗರದಲ್ಲಿ ಸ್ಥಾಪನೆಗೆ ಯೋಜನೆ ಪ್ರಸ್ಥಾವನೆ ಹಿರಿಯ ಅಧಿಕಾರಿಗಳು ಸಲ್ಲಿಸಿದ್ದಾರೆ, ಇಲ್ಲಿ ಆಸ್ಪತ್ರೆ ಆರಂಭಗೊAಡರೆ ಕಲ್ಯಾಣ ಕರ್ನಾಟಕ ಭಾಗದ ರೋಗಿಗಳಿಗೆ ಆಯುರ್ವೇದದ ಎಲ್ಲಾ ವಿದಧ ಚಿಕಿತ್ಸೆಗಳನ್ನು ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಹಿರಿಯ ಮುಖಂಡ ಹೊನ್ನಪ್ಪ ಮುಸ್ಟೂರ, ಸಂಗಮೇಶ ಕೆಂಭಾವಿ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

↑
Suddi Belaku