ಯಾದಗಿರಿ ಯೀಮ್ಸ್‌ನಲ್ಲಿ ವಿದ್ಯಾರ್ಥಿಗಳು, ರೋಗಿಗಳಿಗೆ ಮೂಲಸೌಕರ್ಯ ಒದಗಿಸಿದ ತೃಪ್ತಿ: ಡಾ. ಪಾಟೀಲ್

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ನನ್ನ ೨ ವರ್ಷದ ಅಧಿಕಾರವಧಿಯಲ್ಲಿ ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜು ವಿಧ್ಯಾರ್ಥಿಗಳಿಗೆ ಗುಣಮಟ್ಟದ ವೈಧ್ಯಕೀಯ ಶಿಕ್ಷಣ ದೊರೆಯಲು ಅಗತ್ಯ ಬೋಧಕರನ್ನು ನೇಮಕ ಮಾಡಲಾಗಿದೆ, ಅಲ್ಲದೇ ಇಲ್ಲಿನ ಯೀಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಆದ್ಯತೆ ನೀಡಲಾಗಿದೆ ಎಂದು ಯೀಮ್ಸ್ ನಿರ್ದೇಶಕ ಸಂದೀಪ್ ಪಾಟೀಲ್ ಹೇಳಿದರು.

ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಬೆಂಗಳೂರಿನ ರಾಜೀವ್‌ಗಾಂಧಿ ವಿಶ್ವವಿದ್ಯಾನಿಲಯದ ರಜಿಸ್ಟರ್ ಮೌಲ್ಯಮಾಪನ ವಿಭಾಗಕ್ಕೆ ಪದೋನ್ನತಿ ಹೊಂದಿದ ಪ್ರಯುಕ್ತ ಹಮ್ಮಿಕೊಂಡಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದ ಅವರು, ಮೆಡಿಕಲ್ ಕಾಲೇಜಿನಲ್ಲಿ ಈಗಾಗಲೇ ೧೫೦ ವಿಧ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ, ಅದರ ಸಂಖ್ಯೆ ೨೦೦ಕ್ಕೆ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಅಲ್ಲದೇ ಮೆಡಿಕಲ್ ಸ್ನಾತಕ್ಕೊತ್ತರ ಪದವಿ(ಪಿಜಿ) ವಿಭಾಗ ಆರಂಭಿಸಬೇಕೆAದು ಮನವಿ ಮಾಡಲಾಗಿದೆ, ಅದು ಕೂಡ ಶೀಘ್ರದಲ್ಲಿಯೇ ಅನುಮತಿ ಸಿಗಲಿದೆ ಎಂದು ತಿಳಿಸಿದರು.

ನಾನು ಸ್ಥಳೀಯನಾಗಿದ್ದು, ಇಲ್ಲಿ ಕೂಡ ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಮಹತ್ವದ ಸುಧಾರಣೆ ತರಲು ಗಮನ ನೀಡಿ, ಈಗಾಗಲೇ ಆಸ್ಪತ್ರೆಯಲ್ಲಿ ಅಪಘಾತ ತುರ್ತು ಚಿಕಿತ್ಸಾ ಘಟಕ, ಪ್ರತ್ಯೇಕ ಟಿಬಿ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಿಭಾಗ ತೆರೆಯಲಾಗಿದೆ, ನರ್ಸಿಂಗ್ ಕಾಲೇಜ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೆವೇರಿಸಲಾಗಿದೆ, ಕಾಮಗಾರಿ ಅಭಿವೃದ್ಧಿಯಲ್ಲಿದೆ ಎಂದು ತಿಳಿಸಿದರು.

ವೈಧ್ಯಕೀಯ ಅಭ್ಯಾಸ ಮಾಡುವ ವಿಧ್ಯಾರ್ಥಿಗಳಿಗೆ ಉತ್ತಮ ವಾತಾವರಣ ನಿರ್ಮಾಣ ಮಾಡಲಾಗಿದೆ, ಪರಿಣಾಮ ಪ್ರತಿವರ್ಷ ಕಾಲೇಜಿಗೆ ಉತ್ತಮ ಫಲಿತಾಂಶ ಬರುತ್ತಿದೆ, ಇದು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.
ಮೊದಲು ನಾವು ನಗರದಲ್ಲಿರುವ ಹೆಣ್ಣುಮಕ್ಕಳ ಹೆರಿಗೆ ಆಸ್ಪತ್ರೆಗೆ ಸೂಕ್ಯ ವೈಧ್ಯರನ್ನು ಹಾಗೂ ಸಿಬ್ಬಂಧಿಗಳನ್ನು ನೇಮಕ ಮಾಡಿ, ಉತ್ತಮ ಚಿಕಿತ್ಸೆ ನೀಡುತ್ತಿರುವುದರಿಂದ ಜಿಲ್ಲೆಯ ಗ್ರಾಮೀಣ ಭಾಗದ ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಅನುಕೂಲವಾಗಿದೆ, ಅದರಂತೆ ಯೀಮ್ಸ್ ಅಧೀನದಲ್ಲಿರುವ ಆಸ್ಪತ್ರೆಯಲ್ಲಿ ಅನೇಕ ವಿಭಾಗಗಳನ್ನು ಆರಂಭಿಸಲಾಗಿದೆ, ಈಗಾಗಲೇ ರೋಗಿಗಳ ಆರೋಗ್ಯ ತಪಾಸಣೆ ಮಾಡುವ ಎಂಆರ್‌ಐ ಸ್ಕಾö್ಯನಿಂಗ್ ಯಂತ್ರ ತನ್ನ ಕಾರ್ಯಾರಂಭ ಮಾಡಲಿದೆ, ರಕ್ತ ಘಟಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ, ಶಸ್ತç ಚಿಕಿತ್ಸಾ ವಿಭಾಗದಲ್ಲಿ ಲ್ಯಾಪ್ರೋಸ್ಕೋಪಿ ಉಪಕರಣ ದೊರೆಯಲಿದ್ದು, ಉದರದಲ್ಲಿ ಸಣ್ಣ ಛೇದದ ಮೂಲಕ ಶಸ್ತç ಚಿಕಿತ್ಸೆ ಮಾಡಬಹುದಾಗಿದೆ ಎಂದು ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ವಿವರಿಸಿದರು.

ಯೀಮ್ಸ್ನ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡ ಡಾ. ಶಿವಕುಮಾರ ಮಾತನಾಡಿ, ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗೆ ಹೊಸ ಕಾಯಕಲ್ಪ ನೀಡುವ ಸಂಕಲ್ಪ ಹೊಂದಿದ್ದೇನೆ, ಜೊತೆಗೆ ಪಾರದರ್ಶಕ ಆಡಳಿತ ನೀಡಿ, ಜನರಿಗೆ ಅನುಕೂಲತೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮೆಡಿಕಲ್ ಕಾಲೇಜ್ ಪ್ರಾಂಶುಪಾಲರಾದ ಡಾ. ನವಾಜ್ ಉಮರ್, ಡಿಹೆಚ್‌ಓ ಡಾ. ಮಹೇಶ ಬಿರಾದಾರ, ಡಾ. ರಿಜ್ವಾನಾ ಅಫ್ರೀನ್, ಡಾ. ಸಂತೋಷ ಲಕ್ಷö್ಮಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

↑
Suddi Belaku