ಯಳಂದೂರು ವ್ಯವಸಾಯೋತ್ಪನ್ನ ಮಾರಾಟಗಾರರ ಸಹಕಾರ ಸಂಘವನ್ನು ಲಾಭದ ಹಾದಿಗೆ ತರುವ ಪ್ರಯತ್ನ: ಅಧ್ಯಕ್ಷ ಯೋಗೇಶ್

Posted by

ಸುದ್ದಿ ಬೆಳಕು ವಾರ್ತೆ

ಯಳಂದೂರು : 77 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟಗಾರರ ಸಹಕಾರ ಸಂಘವು ನಷ್ಟದಲ್ಲಿದ್ದು ಇದನ್ನು ಮತ್ತೆ ಲಾಭದ ಹಾದಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಜೆ. ಯೋಗೇಶ್ ತಿಳಿಸಿದರು.

ಅವರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂಘವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕಳೆದ ಎರಡು ಅವಧಿಯಲ್ಲಿ ಸಂಘ ನಷ್ಟದಲ್ಲಿತ್ತು. ಇದನ್ನು ಮತ್ತೆ ಲಾಭದ ಹಾದಿಗೆ ತರುವ ಉದ್ದೇಶದಿಂದ ತಾಲೂಕಿನಲ್ಲಿರುವ 42 ಪಡಿತರ ಅಂಗಡಿಗಳ ಪೈಕಿ 20 ಅಂಗಡಿಯನ್ನಾದರೂ ನೀಡಿ ಎಂದು ಈಗಾಗಲೇ ಸಚಿವ ಪುಟ್ಟರಂಗಶೆಟ್ಟಿ, ಶಾಸಕ ಎ.ಆರ್. ಕೃಷ್ಣಮೂರ್ತಿ, ಸಂಬAಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಇದನ್ನು ನೀಡುವ ಭರವಸೆ ನಮಗೆ ಸಿಕ್ಕಿದೆ. ಅಲ್ಲದೆ ಈ ಹಿಂದೆ ಸಕ್ಕರೆ ಮಾರಾಟದಿಂದ ಬರಬೇಕಿದ್ದ 30 ಲಕ್ಷಕ್ಕೂ ಹೆಚ್ಚಿನ ಹಣವನ್ನು ಕೊಡಿಸಿಕೊಡಿ ಎಂದು ಮನವಿ ಮಾಡಲಾಗಿದೆ. ಇದಕ್ಕೆ ಸಂಬAಧಪಟ್ಟ ದಾಖಲೆಗಳನ್ನು ನೀಡಿದ್ದಲ್ಲಿ ಈ ಹಣವೂ ಲಭಿಸಲಿದೆ. ಅಲ್ಲದೆ ಸಂಸದರು, ಸಚಿವರು ಹಾಗೂ ಶಾಸಕರೊಂದಿಗೆ ಇಲ್ಲೇ ಒಂದು ಸಹಕಾರ ಬ್ಯಾಂಕ್ ಕಟ್ಟಡವನ್ನು ಕಟ್ಟಲು 50 ಲಕ್ಷ ರೂ. ಹಣಕ್ಕೆ ಮನವಿ ಮಾಡಲಾಗಿದ್ದು ಇದಕ್ಕೂ ಪೂರಕ ಸ್ಪಂದನೆ ಸಿಕ್ಕಿದೆ. ಈಗ ಸಂಘವನ್ನು ಇಲ್ಲಿರುವ ಅಂಗಡಿ ಮಳಿಗೆ ಹಾಗೂ ಗೋದಾಮಿನಿ ಕೆಲವು ಭಾಗವನ್ನು ಬಾಡಿಗೆಗೆ ನೀಡಲಾಗಿದ್ದು ಇದರಿಂದ ಬರುವ ಆದಾಯದಿಂದ ಇಲ್ಲಿರುವ ಸಿಬ್ಬಂಧಿಗೆ ಸಂಬಳ ನೀಡಲಾಗುತ್ತಿದೆ. ಈ ಸಂಘವನ್ನು ನಷ್ಟದಿಂದ ಲಾಭದತ್ತ ಕೊಂಡೊಯ್ಯಲು ನಾನು ನಮ್ಮ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರೊಡಗೂಡಿ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಸAಘದ ಪ್ರಭಾರ ಕಾರ್ಯದರ್ಶಿ ಎನ್. ರಮೇಶ 2023-24,24-25 ಹಾಗೂ 26-27 ನೇ ಸಾಲಿನವ ಆಡಳಿತ ವರದಿ, ಜಮಾ ಖರ್ಚುಗಳ ತಖ್ತೆ ಹಾಗೂ 2026-27 ನೇ ಸಾಲಿನ ಆಯವ್ಯಯವನ್ನು ಮಂಡಿಸಿದರು. ಸಂಘದ ಮಾಜಿ ಅಧ್ಯಕ್ಷ ವಡಗೆರೆ ದಾಸ್ ಈ ಹಿಂದಿನ ಸಂಘದ ದಾಖಲೆಗಳನ್ನು ಮತ್ತೆ ಕೆದಕುವುದು ಬೇಡ ಎಂದರು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗವೂ ಜರುಗಿತು. ನಂತರ ಅಧ್ಯಕ್ಷ ಜೆ. ಯೋಗೇಶ್ ಈ ಹಿಂದೆ ನಡೆದಿರುವ ವ್ಯವಹಾರವನ್ನು ಮರು ಆಡಿಟ್ ಮಾಡಿಸಲಾಗುವುದು. ಆಗ ಸಂಬAಧಪಟ್ಟವರ ಸಮ್ಮುಖದಲ್ಲೇ ಇದನ್ನು ಮಾಡಿಸಲಾಗುವುದು ಎಂದು ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಸಂಘದ ಉಪಾಧ್ಯಕ್ಷ ಪುಟ್ಟರಾಜು, ನಿರ್ದೇಶಕರಾದ ಮಹೇಶ್, ಗೌಡಹಳ್ಳಿ ರವಿ, ನಂಜುAಡಸ್ವಾಮಿ, ಪರಶಿವಮೂರ್ತಿ, ಪುಟ್ಟಚಾಮಮ್ಮ, ಮಹದೇವಮ್ಮ, ಮಹೇಶ್, ನಂಜುAಡಸ್ವಾಮಿ, ಚೇತನ್‌ಕುಮಾರ್, ಸಿದ್ದಶೆಟ್ಟಿ, ರಾಜೇಶ್, ಮಾಜಿ ಸದಸ್ಯ ಜೆ. ಶ್ರೀನಿವಾಸ್, ಲಿಂಗರಾಜಮೂರ್ತಿ, ನಟರಾಜು ಸೇರಿದಂತೆ ಅನೇಕರು ಇದ್ದರು.

You Might Also Like

Leave a Reply

Your email address will not be published. Required fields are marked *

Suddi Belaku