ಯಾದಗಿರಿಯಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ: ಮಹೇಶರಡ್ಡಿ ಗೌಡ ಮುದ್ನಾಳ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ನಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಸದಾ ನೆನಪಿನಲ್ಲಿ ಉಳಿಸುವಲ್ಲಿ ಛಾಯಾಗ್ರಾಹಕರ ಪಾತ್ರ ಮಹತ್ವದ್ದಾಗಿದೆ ಎಂದು ಯುವ ಮುಖಂಡ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಗೌಡ ಮುದ್ನಾಳ ಹೇಳಿದರು.

ಯಾದಗಿರಿ ಜಿಲ್ಲಾ ಹಾಗೂ ವಲಯ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ 187ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಛಾಯಾಚಿತ್ರಗಳ ಮೂಲಕ ನಮ್ಮ ಜೀವನದ ಅಮೂಲ್ಯ ಕ್ಷಣಗಳು ಹಾಗೂ ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕಲು ಸಾಧ್ಯವಾಗುತ್ತದೆ. ಇಂತಹ ಅದ್ಭುತ ನೆನಪುಗಳನ್ನು ದಾಖಲಿಸಿ, ಮುಂದಿನ ಪೀಳಿಗೆಗೂ ಜೀವಂತವಾಗಿಡುವ ಕಾರ್ಯವನ್ನು ಛಾಯಾಗ್ರಾಹಕರು ಮಾಡುತ್ತಿದ್ದಾರೆ ಎಂದರು.

ಹುಟ್ಟಿನಿಂದ ಸಾವಿನವರೆಗಿನ ಜೀವನದ ಹಲವು ಪ್ರಮುಖ ಸಂದರ್ಭಗಳನ್ನು ಛಾಯಾಚಿತ್ರಗಳ ಮೂಲಕ ಸದಾ ನೆನಪಿನಲ್ಲಿ ಉಳಿಸುವವರು ಛಾಯಾಗ್ರಾಹಕರು. ಅವರ ವೃತ್ತಿ ಸಮಾಜದಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದು ಹೇಳಿದರು.

ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿಗೆ ಸದಾ ತಮ್ಮ ಬೆಂಬಲವಿದ್ದು, ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಅವರಿಗೆ ಸಕಾಲದಲ್ಲಿ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಮಹೇಶರಡ್ಡಿ ಗೌಡ ಮುದ್ನಾಳ ಭರವಸೆ ನೀಡಿದರು.

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬಸವರಾಜಯ್ಯ ಸ್ವಾಮಿ, ವಲಯ ಅಧ್ಯಕ್ಷ ನಿತ್ಯಾನಂದಸ್ವಾಮಿ ಯರಗೋಳ, ಜಿಲ್ಲಾ ಉಪಾಧ್ಯಕ್ಷ ಹಾಗೂ ಕೆಪಿಎ ನಿರ್ದೇಶಕ ತಾಯಪ್ಪ ಬೊಮ್ಮನ್, ಆಸರೆ ಯೋಜನೆಯ ಉಸ್ತುವಾರಿ ಪ್ರಮೋದ್ ಗೌಡ, ಗೌರವಾಧ್ಯಕ್ಷ ಮಸ್ತೆಪ್ಪ ಬಬಲಾದಿ, ಉರಗ ಸಂರಕ್ಷಕ ನಾಗೇಶ್ ಮುಧೋಳಕರ್, ಜಗದೀಶ್ ಪುರಾಣಿಕ್, ಪತ್ರಕರ್ತರ ಸಂಘದ ಖಜಾಂಚಿ ರಾಜಕುಮಾರ ನಳ್ಳಿಕರ್, ಸಿದ್ದಪ್ಪ ಅಲಸೂರು, ನಿವೃತ್ತ ಎಎಸ್‌ಐ ಬಸವರಾಜ್ ರಾಜಾಪುರ, ನ್ಯಾಯವಾದಿ ವಿಠ್ಠಲ್ ರಾವ್, ಜ್ಯೋತಿ ಸ್ಟುಡಿಯೋದ ಶರಣಪ್ಪ, ಪರಶುರಾಮ ಕುರುಕುಂದಿ, ಶ್ರೀಕಾಂತ್ ಯಲಸತ್ತಿ, ಆಂಜನೇಯ ಹೊನಗೇರ, ಸುಭಾಷ್ ನಾಲವಾರ ಸೇರಿದಂತೆ ಹಲವು ಛಾಯಾಗ್ರಾಹಕರು ಹಾಗೂ ಗಣ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Suddi Belaku