ಯಾದಗಿರಿ : ಯಾದಗಿರಿ ಜಿಲ್ಲಾ ಛಾಯಾಗ್ರಾಹಕರ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಈಶ್ವರ್ ಬಲ್ಕಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ವಿಶ್ವ ಫೋಟೋ ಸ್ಟುಡಿಯೋದಲ್ಲಿ ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಶೇಕ್ ಸರ್ದಾರ್, ಅಧ್ಯಕ್ಷರಾಗಿ ಈಶ್ವರ್ ಬಲ್ಕಲ್, ಉಪಾಧ್ಯಕ್ಷರಾಗಿ ಗೇರ್ಷಮ್ ಮೋಸಸ್, ಕಾರ್ಯದರ್ಶಿಯಾಗಿ ಮಹಮ್ಮದ್ ಉಮಾರ್, ಸಹ ಕಾರ್ಯದರ್ಶಿಯಾಗಿ ನರೇಶ್ (ನೀರಜ್) ಹಾಗೂ ಖಜಾಂಚಿಯಾಗಿ ಶೇಖರ್ ಪಸಪೂಲ್ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಸಂಘದ ಹಿರಿಯ ಮುಖಂಡರಾದ ಪುರುಷೋತ್ತಮ್ ಜವಾಹರ್, ದೊಡ್ಡಪ್ಪ ವಿಶ್ವಕರ್ಮ, ಧರ್ಮಣ್ಣ ಗಿರೆಪ್ಪೋರ್, ಗಿದಿಯೋನ್ ಮೋಸೆಸ್, ವಸಿಂ ಅಹಮದ್, ಮೌನೇಶ್ ಗಿರೆಪ್ಪೋರ್, ಅಜರುದ್ದೀನ್, ಶಹನವಾಜ್, ಬೇಬಿ ರಾಠೋಡ್, ತಾಯಾರ್, ಗಿರೀಶ್ ಸೇರಿದಂತೆ ಹಲವು ಛಾಯಾಗ್ರಾಹಕರು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
Leave a Reply