ಕೆಸ್ತೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ: ವಿಶೇಷ ಗ್ರಾಮಸಭೆ

Posted by

–

ಸುದ್ದಿ ಬೆಳಕು ವಾರ್ತೆ

ಯಳಂದೂರು: ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ದನಕರು, ಮೇವಿನ ಕೊರತೆ, ಸ್ವಚ್ಚತೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಬಗ್ಗೆ ಹರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿಶೇಷ ಗ್ರಾಮಸಭೆಯನ್ನು ಆಯೋಜಿಸುವ ಮೂಲಕ ಕ್ರಮವಹಿಸಲಾಗುವುದು ಎಂದು ಕೆಸ್ತೂರು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಚಂದ್ರಶೇಖರಮೂರ್ತಿ ತಿಳಿಸಿದರು.

ಅವರು ಕೆಸ್ತೂರು ಗ್ರಾಮದ ಮಾರಮ್ಮ ದೇವಸ್ಥಾನ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2025-26 ನೇ ಸಾಲಿನ ನರೇಗಾ ಹಾಗೂ 15 ನೇ ಹಣಕಾಸಿನ ಯೋಜನೆ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೆಸ್ತೂರು ಗ್ರಾಮದಲ್ಲಿ ಜಲ್ ಜೀವನ್ ಯೋಜನೆ ಕಾಮಗಾರಿ ಸಮಪರ್ಕವಾಗಿ ಮಾಡದ ಪರಿಣಾಮ ಜನರಿಗೆ ಕುಡಿಯುವ ನೀರಿನ ಸಮಸ್ಯೆಯು ಉಂಟಾಗುತ್ತಿದೆ. ಈ ಬಗ್ಗೆ ಜಲ್‌ಜೀವನ್ ಯೋಜನೆ ಜೆಇ ಹಾಗೂ ಪಿಡಿಒ ಗಮನಹರಿಸುತ್ತಿಲ್ಲ. ಇದರಿಂದ ಜನರಿಗೆ ಕುಡಿಯುವ ನೀರಿನ ವಿಚಾರದಲ್ಲಿ ತುಂಬಾ ತೊಂದರೆಯಾಗುತ್ತಿದೆ, ಆದರಿಂದ ಕೂಡಲೇ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜೆಜೆಎಂನ ಕಾಮಗಾರಿಯನ್ನು ಸಮಪರ್ಕವಾಗಿ ಮಾಡಬೇಕಾಗಿದೆ. ಗ್ರಾಮ ಸಭೆಗಳ ಬಗ್ಗೆ ಮುಖಂಡರು, ಗ್ರಾಮಸ್ಥರಿಗೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ಮಾಹಿತಿ ಇಲ್ಲ, ಇದನ್ನು ಎಲ್ಲರಿಗೂ ತಿಳಿಸುವ ಜವಾಬ್ದಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲಿದೆ ಎಂದು ಅಧಿಕಾರಿ, ಸಿಬ್ಬಂಧಿಯನ್ನು ತರಾಟೆ ತಗೆದುಕೊಂಡ ಘಟನೆಯೂ ನಡೆಯಿತು. ನಂತರ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಸಭೆ ಕರೆದು ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಭೆಯನ್ನು ಕರೆಯಲಾಗುವುದು ಎಂದು ತಿಳಿಸಿದರು.

ನಂತರ ಲೆಕ್ಕ ಪರಿಶೋಧಕ ಪ್ರಸನ್ನ ಮಾತನಾಡಿ, ಕಳೆದ ಅವಧಿಯಲ್ಲಿ ಗ್ರಾಮ ಪಂಚಾಯಿತಿ 138, ತೋಟಗಾರಿಕೆ ಇಲಾಖೆ-02, ಪಂಚಾಯತ್ ರಾಜ್ ಗ್ರಾಮೀಣ ಅಭಿವೃದ್ಧಿ ಇಲಾಖೆ -09, ಸೇರಿದಂತೆ ಒಟ್ಟು 149 ಕಾಮಗಾರಿಗಳನ್ನು ಕೈಗೊಂಡು ಕೂಲಿ ಮೊತ್ತ 81,99,485 ರೂ. ಸಾಮಾಗ್ರಿ ವೆಚ್ಚ 3,65,121 ರೂ. ಸೇರಿ ಒಟ್ಟು 85,64,606 ರೂ. ಗಳನ್ನು ಪಾವತಿಯಾಗಿದೆ. ಪ್ರಸುತ್ತ ವಿಜಿಬಿ ಜೀರಾಮ್‌ಜಿ ಯೋಜನೆಯಡಿಯಲ್ಲಿ 120 ದಿನಗಳ ಕಾಲ ಕೂಲಿ ಕೆಲಸಗಳನ್ನು ಮಾಡಲು ಅವಕಾಶವಿದೆ. ಸಾರ್ವಜನಿಕರು ಜಾಬ್ ಕಾರ್ಡ್ಗಳನ್ನು ಮಾಡಿಸಿಕೊಂಡು ವೈಯುಕ್ತಿಕ ಹಾಗೂ ಸಾಮೂಹಿಕ ಕಾರ್ಯಗಳನ್ನು ಮಾಡಿಸಿಕೊಳ್ಳುವ ಅವಕಾಶವಿದ್ದು ಇದರ ಬಳಕೆಯನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಎಂದು ಸಭೆಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಪಿಡಿಒ ಮಹದೇವಸ್ವಾಮಿ, ನೋಡಲ್ ಅಧಿಕಾರಿ ಶಿಕುಮಾರ್, ಜೀರಾಮ್ ಜಿ ಯೋಜನೆಯ ಸಹಾಯಕ ನಿರ್ದೇಶಕ ರಾಕೇಶ್ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

↑
Suddi Belaku