ಆರ್‌ಎಸ್‌ಎಸ್ ಪಥಸಂಚಲನ ವಿವಾದ: ಸರ್ಕಾರಿ ನೌಕರರು ಇತಿಮಿತಿಯಲ್ಲಿರಬೇಕು ಶರಣಪ್ರಕಾಶ ಪಾಟೀಲ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಆರ್.ಎಸ್ಸೆಸ್. ಪಂಥ ಸಂಚಲನ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿರುವ ಹಿನ್ನೆಲೆಯಲ್ಲಿ ಯಾದಗಿರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು, ಸರ್ಕಾರಿ ನೌಕರಸ್ಥರು ತಮ್ಮ ಕಾರ್ಯದಲ್ಲಿ ಮಗ್ನರಾಗಿರಬೇಕೆ ಹೊತರು ಖಾಸಗಿ ಸಂಘಗಳ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳಬಾರದು, ಸರ್ಕಾರಿ ನೌಕರಸ್ಥರು ‌ಇತಿಮಿತಿಗಳಲ್ಲಿ ಇರಬೇಕೆಂದು ಹೇಳಿದರು.

ಪ್ರಹ್ಲಾದ್ ಜೋಶಿ ಅವರು ಕೇಂದ್ರದಲ್ಲಿ ಗುರುತಿಸಲ್ಪಡುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಾತಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ನೈತಿಕತೆಯ ಹಿನ್ನೆಲೆಯಲ್ಲಿ ಸರ್ಕಾರ ನಡೆಸುತ್ತಿದೆ. ಈ ನೈತಿಕತೆ ಕೇಂದ್ರ ಬಿಜೆಪಿ‌ ಸರ್ಕಾರಕ್ಕೆ ಇದೆನಾ‌ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಲಿ ಎಂದು ಟಾಂಗ್ ನೀಡಿದರು.

ಸರ್ಕಾರಿ ನೌಕರರು ಪಂಥ ಸಂಚಲನದಲ್ಲಿ ಭಾಗವಹಿಸುವುದು ಬಿಡುವುದು ಅವರ ವಯಕ್ತಿಕ ಆದರೂ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿ ಭಾಗಿಯಾಗುವುದು ಸಾಮನ್ಯವಾಗಿ ಚರ್ಚೆಗೆ ಎಡೆಮಾಡಿಕೊಡುತ್ತದೆ ಎಂದರು.

You Might Also Like

Leave a Reply

Your email address will not be published. Required fields are marked *

Suddi Belaku