
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ವಿಧಾನಸಭಾ ಕ್ಷೇತ್ರದ ಟಿ.ವಡಗೇರಾ ಗ್ರಾಮದಲ್ಲಿ ಭಾನುವಾರ ಪಕ್ಷದ ಮುಖಂಡ ಭೀಮಶಂಕರ್ ಮಾತಾ ಅವರ ನಿವಾಸದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 137ನೇ ಮನ್ ಕಿ ಬಾತ್ ಕಾರ್ಯಕ್ರಮವನ್ನು ಬಿಜೆಪಿ ಹಿರಿಯ ಮುಖಂಡರಾದ ರಾಚನಗೌಡ ಮುದ್ನಾಳ ಅವರು ನೂರಾರು ಕಾರ್ಯಕರ್ತರೊಂದಿಗೆ ವೀಕ್ಷಿಸಿದರು.

ಪ್ರಧಾನಿಯವರು ದೇಶದ ಯುವಶಕ್ತಿ, ಸ್ವಾವಲಂಬಿ ಭಾರತ ಮತ್ತು ನಾಡಿನ ಸಾಧಕರ ಕುರಿತು ನೀಡಿದ ಸಂದೇಶವನ್ನು ಕಾರ್ಯಕರ್ತರು ಗಮನವಿಟ್ಟು ಆಲಿಸಿದರು. ಮನ್ ಕಿ ಬಾತ್ ಕೇವಲ ರೇಡಿಯೋ ಕಾರ್ಯಕ್ರಮವಲ್ಲ, ದೇಶದ 140 ಕೋಟಿ ಜನರನ್ನು ಬೆಸೆಯುವ ಭಾವನಾತ್ಮಕ ಸೇತುವೆ ಎಂದು ಈ ಸಂದರ್ಭದಲ್ಲಿ ಮುದ್ನಾಳ ಅವರು ಬಣ್ಣಿಸಿದರು.
ಕಾರ್ಯಕ್ರಮದ ಬಳಿಕ ರಾಚನಗೌಡ ಮುದ್ನಾಳ ಅವರು ನೇರವಾಗಿ ಟಿ.ವಡಗೇರಾ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ ರೈತರೊಂದಿಗೆ ಆತ್ಮೀಯವಾಗಿ ಸಮಾಲೋಚನೆ ನಡೆಸಿದರು.

ಮಳೆಯಿಲ್ಲದೇ ತೀವ್ರ ಬರ ಎದುರಾಗಿರುವ ಹಿನ್ನಲೆಯಲ್ಲಿ ರೈತರ ಸಂಕಷ್ಟ ಪರಿಸ್ಥಿತಿಯನ್ನು ಕಣ್ಣಾರೆ ಕಂಡು,ಕೆಲವು ರೈತರು ಬೆಳೆದಿರುವ ವಿವಿಧ ಬೆಳೆಗಳ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲಿಸಿ, ಬೆಳೆಗಳ ಬೆಳವಣಿಗೆ, ಮಳೆಯ ಪ್ರಮಾಣ, ನೀರಾವರಿ ವ್ಯವಸ್ಥೆ, ಕೃಷಿ ಚಟುವಟಿಕೆಗಳು ಹಾಗೂ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ರೈತರೊಂದಿಗೆ ಚರ್ಚಿಸಿದರು. ರೈತರ ಕೃಷಿ ಅನುಭವಗಳು, ಬೆಳೆ ನಿರ್ವಹಣೆಯಲ್ಲಿ ಎದುರಾಗುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಸವರಾಜಪ್ಪಗೌಡ ಪಾಟೀಲ್ ಗುಂಡಗುರ್ತಿ, ತಿಮ್ಮರೆಡ್ಡಿಗೌಡ ಬಿ. ಪಾಟೀಲ್, ಚಂದ್ರಶೇಖರ್ ಮ್ಯಾಗೇರಿ, ಸಂಗಣ್ಣಗೌಡ ಅನವಾರ, ಅಣಮಾರೆಡ್ಡಿ ಬಿ. ಪಾಟೀಲ್, ಶರಣಪ್ಪ ಗೌಡೂರು, ದೇವರೆಡ್ಡಿಗೌಡ ಬಿ. ಪಾಟೀಲ್, ಅಯ್ಯಣ್ಣ ಗುತ್ತೇದಾರ, ಸಿದ್ದಲಿಂಗಪ್ಪ ಮೇಸ್ತ್ರಿ, ಧರ್ಮೇಶ್ ಎಂ. ಗಗ್ರಿ, ನಿಂಗಯ್ಯ ಗುತ್ತೇದಾರ, ನಾಗಮೂರ್ತಿ ವಿಶ್ವಕರ್ಮ, ಸಿದ್ದರಾಮರೆಡ್ಡಿ ಬಿ. ಪಾಟೀಲ್, ದೇವೇಂದ್ರಪ್ಪ ಕೋನಳ್ಳಿ, ವೆಂಕಟೇಶ್ ಕಾಟಮಳ್ಳಿ, ಮಲ್ಲಿಕಾರ್ಜುನ ಗೌಡ ಹೊಸಮನಿ, ವೀರೇಶ್ ಗೌಡ ಪಾಟೀಲ್, ಯಂಕಪ್ಪ ಕಾಟಮಳ್ಳಿ, ಮೌನೇಶ್ ಉಪ್ಪಾರ್, ಸುರೇಶ್ ರೆಡ್ಡಿ ಗೋನಲ್, ಬಸವರಾಜ್ ಬಿ. ಪಾಟೀಲ್, ತಿಮ್ಮಣ್ಣ ದೊರೆ, ವೆಂಕಟೇಶ್ ಕಕ್ಕಸಗೇರಾ, ಹಣಮಣ್ಣಗೌಡ ರಸ್ತಾಪುರ್, ಅಣ್ಣಪ್ಪ ದೊರೆ ಅನವಾರ್, ಜಗನ್ನಾಥ್ ರೆಡ್ಡಿ ಹೊಸಮನಿ, ಮೌನೇಶ್ ಕೆಂಚನೋರ್, ದೇವಪ್ಪ ಮಾಮನಗುಡ್ಡ, ಬಂಡೇಶ್ ಗೌಡ ಬಿರಾದಾರ್, ಅಯ್ಯಾಳ, ಸಿದ್ದು ನಾಟಕ, ಶಿವಪ್ಪ ಮಾತಂಗಿ, ಭೀಮು ಹಂಚಿನಾಳ, ಬಸವರಾಜ ಗಗ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.












Leave a Reply