ಯಾದಗಿರಿಗೆ ರಾಜೀವಗಾಂಧಿ ಜ್ಯೋತಿ ಸದ್ಭಾವನಾ ಯಾತ್ರೆ; ರಾಷ್ಟ್ರೀಯ ಏಕತೆ ಸಂದೇಶ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ರಾಷ್ಟಿçÃಯ ಏಕತೆ, ಕೋಮು ಸಾಮರಸ್ಯ, ಜಾತ್ಯಾತೀತತೆ ಹಾಗೂ ಶಾಂತಿಯ ಸಂದೇಶವನ್ನ ಸಾರವ ರಾಜೀವಗಾಂಧಿ ಜ್ಯೋತಿ ಸದ್ಭಾವನಾ ಯಾತ್ರೆಗೆ ಇಲ್ಲಿಯ ಕಾಂಗ್ರೆಸ್ ಕಚೇರಿಯ ಬಳಿ ಸ್ವಾಗತ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಇದೇ ಆ.೯ ರಂದು ಶ್ರೀಪೆರಂಬುದೂರಿನಿAದ ಯಾತ್ರೆಗೆ ಚಾಲನೆ ನೀಡಲಾಗಿದೆ. ಸುಮಾರು ೩ ಸಾವಿರ ಕಿ.ಮೀ. ೧೨ ದಿನಗಳ ಯಾತ್ರೆ ಎಂಟು ರಾಜ್ಯಗಳ ಮೂಲಕ ಸಾಗಲಿದ್ದು ಇಂದು ಯಾದಗಿರಿಗೆ ಆಗಮಿಸಿದೆ. ಯಾತ್ರೆಯು ಮುಂದೆ ಸಾಗಿ ಆ.೧೯ ರಂದು ರಾಷ್ಟç ರಾಜಧಾನಿ ನವದೆಹಲಯನ್ನು ತಲುಪಲಿದೆ. ತಮಿಳನಾಡಿನಿಂದ ಆರಂಭವಾದ ಯಾತ್ರೆಯು ಕರ್ನಾಟಕದಲ್ಲಿಯ ಬೆಂಗಳೂರು, ಚಿತ್ರದುರ್ಗ, ರಾಯಚೂರು,ಯಾದಗಿರಿ ಹಾಗೂ ಕಲಬುರಗಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಯಾತ್ರೆ ಸಾಗಲಿದೆ ಎಂದು ವಿವರಿಸಿದರು.

ಭಾರತದ ಭಾಷಾ, ಧಾರ್ಮಿಕ ಹಾಗೂ ಪ್ರಾದೇಶಿಕ ವೈವಿಧ್ಯತೆಯ ನಡುವೆಯೂ ರಾಷ್ಟ್ರೀಯ ಏಕತೆಯನ್ನು ಬಲಪಡಿಸುವ ಉದ್ದೇಶ ಯಾತ್ರೆಯು ಹೊಂದಿದೆ.ಕಳೆದ ೩೫ ವರ್ಷಗಳಿಂದ ಸದ್ಭಾವನೆಯ ಜ್ಯೋತಿಯನ್ನು ಜೀವಂತವಾಗಿಟ್ಟುಕೊAಡು ಬಂದಿರುವ ಯಾತ್ರೆ, ಭಾರತೀಯರು ಒಗ್ಗಟ್ಟಾಗಿ ನಿಂತಾಗ ಇನ್ನಷ್ಟು ಬಲಿಷ್ಠರಾಗುತ್ತಾರೆ ಎಂಬ ಸಂದೇಶವನ್ನು ಸಾರುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಖಜಾಂಚಿ ಚಿದಾನಂದಪ್ಪ ಕಾಳಬೆಳಗುಂದಿ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಲ್ಲಾಧ್ಯಕ್ಷ ಶ್ರೇಣಿಕಕುಮಾರ ಧೋಕಾ,ಮುಖಂಡರಾದ ಮರೆಪ್ಪ ಬಿಳ್ಹಾರ, ಬಸವರಾಜ ಬಾಗ್ಲಿ, ಸ್ಯಾಂಶನ್ ಮಾಳಿಕೇರಿ, ಪರಶುರಾಮ ಚವ್ಹಾಣ, ಮಲ್ಲಿಕಾರ್ಜುನ ಈಟೆ, ಲಕ್ಷಾರೆಡ್ಡಿ, ಬಾಷುಮಿಯಾ, ಹೊನ್ನೇಶ ದೊಡ್ಮನಿ, ಲಕ್ಷಣ ರಾಠೋಡ, ತಿಮ್ಮನ್ನ ನಾಯ್ಕಲ್, ನಾಗನಗೌಡ ಹಳಿಗೇರಾ, ಮಲ್ಲಮ್ಮ ಕೋಮಾರ, ಪದ್ಮಾವತಿ, ರಾಜಾ ಮೈನೊದ್ದೀನ್, ಮೈನೊದ್ದೀನ್ ಮಿಸ್ಟಿç ಹಾಗೂ ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *

Suddi Belaku