
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ನಗರದ ಸರ್ಕಾರಿ ಪದವಿಕಾಲೇಜಿನಿಂದ ಗ್ರಾಮೀಣ ಠಾಣೆ ವರೆಗಿನ ರಸ್ತೆ ಬದಿ ಪಾದಚಾರಿ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬವಾಗಿ ನಡೆಯುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಅಲ್ಲದೇ ಕಾಮಗಾರಿ ಕಳಪೆಯಾಗಿದ್ದು, ಮೇಲಾಗಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಒಟ್ಟಾರೆ ಕಾಮಗಾರಿ ಬ್ರಷ್ಟಾಚಾರದ ಕೂಪವಾಗಿದ್ದು, ಮಂದಗತಿಯಿAದ ನಡೆಯುತ್ತಿದೆ. ಕಾಮಗಾರಿ ಅಂಗವಾಗಿ ಅಳಿದುಳದ ಮಣ್ಣನ್ನು ರಸ್ತೆಯ ಮೇಲೆ ಬಿಟ್ಟಿರುವುದರಿಂದ ಮೊದಲೇ ಕಿರಿದಾದ ರಸ್ತೆ ಇನ್ನು ಕಿರಿದಾಗಿರುವುದರಿಂದ ಜನತೆಗೆ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಪಾದಚಾರಿ ರಸ್ತೆಯ ಕಾಮಗಾರಿ ಮಾಡುತ್ತಿದ್ದರೂ ಡ್ರೆöÊನೇಜ್ ಕಾಮಗಾರಿ ಮಾಡದೇ ಹಳೆ ಚರಂಡಿ ಮೇಲೆಯೇ ಕಾಮಗಾರಿ ಮಾಡಲಾಗುತ್ತಿದೆ. ಹೊಸ ಡ್ರೆöÊನೇಜ್ ಮಾಡಲು ಎಸ್ಟಿಮೇಟ್ ನಲ್ಲಿ ಅವಕಾಶ ಇಲ್ಲ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ರಸ್ತೆ ಮೇಲೆ ಬಿದ್ದ ಮಳೆ ನೀರು ಹರಿದು ಹೋಗಿ ಪಾದಚಾರ ರಸ್ತೆ ಬಳಿ ಡ್ರೆöÊನೇಜ್ ಗೆ ಲಿಂಕ್ ಕೊಡಬೇಕು ಅದೂ ಸಹ ಅಂದಾಜು ಪತ್ರಿಕೆಯಲ್ಲಿ ಇಲ್ಲ ಎಂದು ಹೇಳುತ್ತಿರುವುದು ನೋಡಿದರೆ ಕೇವಲ ದುಡ್ಡು ಹೊಡೆಯಲು ಕಾಮಗಾರಿ ಮಾಡಲಾಗುತ್ತಿದೆಯೇ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಇನ್ನು ಸದ್ರಿ ರಸ್ತೆಯುದ್ದಕ್ಕೂ ಅಂಗಡಿ ಮುಂಗಟ್ಟುಕಾರರು ನಿಯಮಾವಳಿ ಪ್ರಕಾರ ಸೆಟ್ ಬ್ಯಾಕ್ ಬಿಟ್ಟು ಕಟ್ಟಡ ಅಂಗಡಿ ಮುಂಗಟ್ಟು ಕಟ್ಟಿಕೊಳ್ಳಬೇಕು ಆದರೆ ಇದಾವುದೂ ಈ ರಸ್ತೆ ಮೇಲೆ ಆಗಿಲ್ಲದಿರುವುದರಿಂದ ವಾಹನಗಳು ಪುಟ್ ಪಾತ್ ಮುಂದೆ ಬಿದ್ದಿರುವ ಮಣ್ಣಿನ ನಂತರದ ರಸ್ತೆ ಮೇಲೆ ನಿಲುಗಡೆ ಮಾಡುತ್ತಿರುವುದರಿಂದ ರಸ್ತೆ ಕೇವಲ 10 ಅಡಿಯಷ್ಟು ಮಾತ್ರ ಉಳಿದಿರುವುದರಿಂದ ಸಂಚಾರ ತೀರ ಸಮಸ್ಯೆಕರವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸಂಬAಧಪಟ್ಟ ನಗರಸಭೆಯವರು ಇಂತಹ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳಬೇಕು ಸೆಟ್ ಬ್ಯಾಕ್ ತೆರವು ಮಾಡಿ ಅನುಕೂಲ ಮಾಡಿಕೊಡಬೇಕು.
ಇದಲ್ಲದೇ ಸಂಚಾರಿ ಪೊಲೀಸರು ಈ ರಸ್ತೆಯುದ್ದಕ್ಕೂ ರ್ರಾಬರ್ರಿಯಾಗಿ ನಿಲ್ಲಿಸುವ ವಾಹನ ಸವಾರರ ವಿರುದ್ಧ ದಂಡಾಸ್ತç ಪ್ರಯೋಗ ಮಾಡಿ ಸುಗಮ ಸಂಚಾರಕ್ಕೆ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೂಡಲೇ ಎಲ್ಲ ಸಂಬAಧಿಸಿದ ಇಲಾಖೆಯವರು ಕ್ರಮ ವಹಿಸಿ ಅನುಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಸಂತೋಷ ನಿರ್ಮಲಕರ್, ನಿಂಗಪ್ಪ ಗುಡಗುಡಿ, ಭೀಮಾಶಂಕರ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಅಶೋಕ ನಾಯಕ, ಬಸವರಾಜ ಜಗನ್ನಾಥ ಎಚ್ಚರಿಸಿದ್ದಾರೆ.












Leave a Reply