ಕಲೆ ಸಂಸ್ಕೃತಿ ಬೆಳೆಸೋಣ: ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್

Posted by

ಜಾನಪದ ಸಂಭ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅಭಿಮತ.

ಯಾದಗಿರಿ: ಕಲೆ ಸಾಹಿತ್ಯ ಸಂಸ್ಕೃತಿ ನಮ್ಮ ಭಾಗದ ಜೀವಂತ ಕಲೆಯಾಗಿದೆ, ಹಲವು ರೀತಿಯಲ್ಲಿ ವಿವಿಧ ಭಾಷೆಗಳಲ್ಲಿ ಕಲೆಯನ್ನು ಕಾಣುತ್ತೇವೆ, ತಲೆ ಸಾಹಿತ್ಯ ಸಂಸ್ಕೃತಿಯನ್ನು ನಾವೆಲ್ಲರೂ ಪ್ರೋತ್ಸಾಹಿಸಿ ಬೆಂಬಲಿಸೋಣ ಎಂದು ಶಾಸಕ ಚೆನ್ನಾಗಿರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಡೆದ ಶ್ರೀ ರೇಣುಕಾದೇವಿ ಸಾಂಸ್ಕೃತಿಕ ಸಾಮಾಜಿಕ ಕಲಾ ಸಂಘ (ರಿ) ಹುಲ್ ಕಾಲ್ (ಜೆ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು (ಯಾದಗಿರಿ) ಇವರ ಸಂಯೋಗದಲ್ಲಿ ನಡೆದ ಜಾನಪದ ಸಂಭ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ನಮ್ಮ ಭಾಗದ ಸಂಸ್ಕೃತಿಯನ್ನು ಇತ್ತೀಚಿನ ದಿನಮಾನಗಳಲ್ಲಿ ನೋಡುವ ಸ್ಥಿತಿಯ ಆಗಿಲ್ಲ ಯಾಕೆಂದರೆ ನಮ್ಮ ಕಲೆ ಸಾಹಿತ್ಯ ಸಂಸ್ಕೃತಿ ಅನ್ನೋದು ಮರೆಮಾಚಿ ಹೋಗಿದೆ ಆದ್ದರಿಂದ ಇಂಥ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಂದ ಮತ್ತೆ ಪುನರ್ಜನ್ಮ ಪಡೆಯುತ್ತಿವೆ, ನೈಜ ಕಲಾವಿದರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪ್ರತಿಯೊಬ್ಬರು ಪಡೆದುಕೊಳ್ಳಿ ಎಂದು ಹೇಳಿದರು.

ಶ್ರೀ ರೇಣುಕಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಮಹೇಶ್ ಗೌಡ ಮುದ್ನಾಳ್ ರವರು ಮಾತನಾಡಿ ನಮ್ಮ ಭಾಗದ ಕಲಾವಿದರು ಅತಿ ಹೆಚ್ಚಾಗಿದ್ದು ಅವರು ಶ್ರೀಮಂತ ಕುಟುಂಬದಲ್ಲಿ ಜನಿಸದೆ ಕಡುಬಡತನದಲ್ಲಿ ಹುಟ್ಟಿ ತಮ್ಮ ಕಲೆಯನ್ನು ಪ್ರದರ್ಶಿಸಿ ಜೀವನ ನಡೆಸುತ್ತಿದ್ದಾರೆ, ಅಂತವರಿಗೆ ಸರ್ಕಾರ ಮೊದಲ ಆದ್ಯತೆ ನೀಡಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ನೇರವಾಗಿ ಹಾಗೂ ಕಲಾವಿದರಿಗೆ ದೊರೆಯುವಂತೆ ಮಾಡಬೇಕು ಎಂದು ಹೇಳಿದರು.

ವಾಸ್ತವಿಕ ನುಡಿದ ಸಮನ್ವಯ ಸೇವಾ ಸಂಸ್ಥೆಯ ಅಧ್ಯಕ್ಷ ಡಿ.ಕೆ.ದೇವಿಂದ್ರ ರವರು ಕಲೆ ಸಾಹಿತ್ಯ ಸಂಸ್ಕೃತಿ ಈ ಭಾಗದ ವೈಶಿಷ್ಟತೆ ಹೊಂದಿದೆ, ನೈಜ ಕಲಾವಿದರು ಈ ಭಾಗದಲ್ಲಿ ಅತೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಆದ್ದರಿಂದ ಕಲಾವಿದರಿಗೆ ಸರ್ಕಾರದಿಂದ ಸಂಘ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡಿ ಈ ಭಾಗದ ಕಲಾವಿದರಿಗೆ ಜೀವ ತುಂಬುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ದೇವತ್ಕಲ್ಲಿನ ಸಾಬಣ್ಣ ಪೂಜಾರಿ, ಬಸವರಾಜ್ ತಾತ ಕೊಂಕಲ್, ಕಾರ್ಯನಿರತ ಪತ್ರಕರ್ತರ ಸಂಪಾದಕ ಹಾಗೂ ವರದಿಗಾರ ಸಂಘದ ಜಿಲ್ಲಾ ಅಧ್ಯಕ್ಷ ರಫೀಕ್ ಪಾಟೇಲ್, ಕಾರ್ಯದರ್ಶಿ ನಿಜಾಮುದ್ದೀನ್, ಶಂಕರ್ ಸೋನಾರೆ, ಹೇಮರೆಡ್ಡಿ ಮುಂಡಾಸ್, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಜಗದೇಶ ದಾಸನಕೆರಿ, ಬಸ್ಸಮ್ಮ ಪೂಜಾರಿ, ತಾರಾದೇವಿ, ಕಾರ್ಯಕ್ರಮದ ಅಧ್ಯಕ್ಷತೆ ಹಣಮಂತ ಬಂಡಾರಿ, ಭೀಮಪ್ಪ ಭಂಡಾರಿ ಇದ್ದರು. ಈ ಕಾರ್ಯಕ್ರಮದಲ್ಲಿ ಸುಗಮ ಸಂಗೀತ ತಂಡ, ಜಾನಪದ ತಂಡ , ತತ್ವಪದ, ಶೋಬಾನ ಪದ ತಂಡ, ಹಲಗಿ ತಂಡದರು ಒಂದೇ ಉಡುಪುಗಳು ಹಾಕಿ ನೋಡುಗರ ಗಮನ ಸೆಳೆದವು. ಸಂಗೀತ ಕಾರ್ಯಕ್ರಮವನ್ನು ಶರಣು ಕುಲಕುಂದ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

Suddi Belaku