
ಸುದ್ದಿ ಬೆಳಕು ವಾರ್ತೆ
ಹೊಳಲ್ಕೆರೆ : ಜಮೀನು ತೋಟಗಳಲ್ಲಿ ಕೇಬಲ್ ವೈಯರ್, ಮೋಟಾರ್, ಪಂಪ್ ಪೈಪು ಹಾಗೂ ಸ್ಟಾರ್ಟರ್ ಕಳ್ಳತನಗಳು ನಡೆಯುತ್ತಿದ್ದು ರೈತ ಬಾಂಧವರು ಎಚ್ಚರಿಕೆ ವಹಿಸಬೇಕಿದೆ ಎಂದು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ ಪಿಎಸ್ಐ ಅಶ್ವಿನಿ ಹೇಳಿದರು.
ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೆಚ್.ಡಿ ಪುರ.ಉಪ್ಪರಿಗೇನಹಳ್ಳಿ.ಕೆರೆಯಾ ಗಳಹಳ್ಳಿ. ತೇಕಲವಟ್ಟಿ ಹಳ್ಳಿಗಳಿಗೆ ಬೇಟಿ ನೀಡಿ ಕಳ್ಳತನದ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು.
ತಡರಾತ್ರಿ ವೇಳೆ ಯಾರೂ ಇಲ್ಲದ ವೇಳೆ ಜಮೀನುಗಳಿಗೆ ನುಗ್ಗುವ ಕಿಡಿಗೇಡಿ ಕಳ್ಳರ ತಂಡ ಕೇಬಲ್ ಹಾಗೂ ಮೋಟಾರ್ ಪಂಪು ಕಳ್ಳತನ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ ಹಾಗಾಗಿ ರೈತರು ಎಚ್ಚರಿಕೆ ಯಿಂದ ಇರಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದರು.
ಜಾಗೃತಿ ಕಾರ್ಯಕ್ರಮ : ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಭಾನುವಾರ ಪೊಲೀಸರು ಕೆರೆಯಾಗಳಹಳ್ಳಿ ಹಾಗೂ ಉಪ್ಪರಿಗೇನಹಳ್ಳಿ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಪಿಎಸ್ಐ ಅಶ್ವಿನಿ ಮಾತನಾಡಿ ಬೀಗ ಹಾಕಿರುವ ಮನೆಗಳ ಸುರಕ್ಷತೆ. ಮನೆ ಕಳ್ಳತನ ತಡೆಗಟ್ಟಲು ಪಾಲಿಸಬೇಕಾದ ಕ್ರಮ. ಮನೆ ಬಾಡಿಗೆ ನೀಡುವಾಗ ಪಾಲಿಸಬೇಕಾದ ಕ್ರಮ.ಸರಗಳ್ಳತನ ತಡೆಗಟ್ಟಲು .ವಾಹನ ಕಳಲು ತಡೆಗಟ್ಟಲು ಪಾಲಿಸಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ವಿವರಿಸಿದರು.
ಬೀಗ ಹಾಕಿರುವ ಮನೆಗಳ ಹೆಸರು ವಿಳಾಸ ಹಾಗೂ ಯಾವ ದಿನದಿಂದ ಯಾವ ದಿನದವರೆಗೆ ಮನೆಯಲ್ಲಿ ಇರುವುದಿಲ್ಲ ಎಂಬ ಜಿಪಿಎಸ್ ಪೋಟೋ ತೆಗೆದು ವಿವರವನ್ನು ಮೊ: 8277985328 ಗೆ ಎಸ್ಎಂಎಸ್ ಮಾಡಿ ಮಾಹಿತಿ ತಿಳಿಸಬೇಕು.ಈ ರೀತಿ ಬೀಗ ಹಾಕಿದ ಮನೆಗಳಿಗೆ ರಾತ್ರಿ ಗಸ್ತಿನಲ್ಲಿರುವ ಪೊಲೀಸರು ವಿಶೇಷ ಗಮನ ಕೊಡುತ್ತಾರೆ ಎಂದರು.ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.











Leave a Reply