ರೈತರ ಕಬ್ಬಿನ ಬಾಕಿ ಹಣ ಕೂಡಲೆ ಬಿಡುಗಡೆ ಮಾಡುವಂತೆ:ಮಂಜುನಾಥ್ ರೆಡ್ಡಿ ಒತ್ತಾಯ

Posted by

ಸುದ್ದಿ ಬೆಳಕು ವಾರ್ತೆ

ವಡಗೇರಾ:ತಾಲೂಕಿನ ತುಮಕೂರು ಗ್ರಾಮದ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಗಾರರ ಬಾಕಿ ಉಳಿಸಿಕೊಂಡಿರುವ ಸುಮಾರು 40 ಕೋಟಿಗೊ ಹೆಚ್ಚು ಹಣವನ್ನು ಕೂಡಲೇ ಪಾವತಿಸುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ರೆಡ್ಡಿ ಚೆನ್ನೂರು. ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕೂರ್ ಗ್ರೀನ್ ಸಕ್ಕರೆ ಕಾರ್ಖಾನೆಯ ಮಾಲೀಕರು ಆಂಧ್ರ ಮೂಲದವರಾಗಿದ್ದು ಕರ್ನಾಟಕದ ರೈತರಿಗೆ ಪ್ರತಿ ವರ್ಷವೂ ಕಬ್ಬು ಮಾರಾಟ ಮಾಡಿದ ಕೋಟಿಗಟ್ಟಲೆ ಹಣವನ್ನು ಸರಿಯಾದ ಸಮಯಕ್ಕೆ ನೀಡದೆ ದಬ್ಬಾಳಿಕ್ಕೆ ಮೋಸ ವಂಚನೆ ಮಾಡುತ್ತಿದ್ದಾರೆ ಎಂದು ಆರೂಪಿಸಿದ್ದಾರೆ.ಯಾದಗಿರಿ ಕಲಬುರ್ಗಿ ಬೀದರ್ ಜಿಲ್ಲೆಯ ರೈತರು ಕಬ್ಬು ಮಾರಾಟ ಮಾಡಿ ಸುಮಾರು ತಿಂಗಳುಗಳೇ ಕಳೆಯುತ್ತಿವೆ ಆದರೆ ಕಾರ್ಖಾನೆಯವರು ಸರಿಯಾದ ಸಮಯಕ್ಕೆ ಕಬ್ಬು ಬೆಳೆಗಾರರಿಗೆ ಹಣ ಪಾವತಿಸದೆ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.ಈ ಕುರಿತು ಸಾಕಷ್ಟು ಬಾರಿ ಸರ್ಕಾರ ಮತ್ತು ಜಿಲ್ಲಾಡಳಿತ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಇನ್ನಾದಾದರೂ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯ ಮಾಲೀಕರು ರೈತರಿಗೆ ಕಬ್ಬಿನ ಬಾಕಿ ಹಣ ಹಾಗೂ ಸರ್ಕಾರ ನಿಗದಿಪಡಿಸಿದ ದರದ ಹಣವನ್ನು ಪಾವತಿಸಬೇಕು ಒಂದು ವೇಳೆ ನಿರ್ಲಕ್ಷ ವಹಿಸಿದ್ದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯದ್ಯಕ್ಷರಾದ ಚೂನಪ್ಪ ಪೂಜಾರಿ ಹಾಗೂ ರಾಜ್ಯ ಕಾರ್ಯಧ್ಯಕ್ಷರಾದ ಮಹೇಶ್ ಪಾಟೀಲ್ ಸುಬೇದಾರ್ ನೇತೃತ್ವದಲ್ಲಿ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗೆ ಬೀಗ ಜಡಿದು ಉಗ್ರ ಹೋರಾಟ ಮಾಡುವುದಾಗಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ರೆಡ್ಡಿ ಚೆನ್ನೂರ್ ಎಚ್ಚರಿಸಿದ್ದಾರೆ

Leave a Reply

Your email address will not be published. Required fields are marked *

Suddi Belaku