ಮಹೇಶರಡ್ಡಿ ಮುದ್ನಾಳ ಅವರಿಗೆ ಸನ್ಮಾನ – ಯುವ ನಾಯಕರಾಗಿ ಬೆಳೆಯಲಿ ಎಂದು ಹಾರೈಕೆ

Posted by

ಸುದ್ದಿ ಬೆಳಕು ವಾರ್ತೆ

​ಯಾದಗಿರಿ: ರಾಷ್ಟ್ರೀಯ ವೀರಶೈವ ಮಹಾಸಭಾ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ, ಮಾಜಿ ಶಾಸಕ ದಿ. ವೆಂಕಟರೆಡ್ಡಿ ಮುದ್ನಾಳ ಅವರ ಸುಪುತ್ರರಾದ ಮಹೇಶರಡ್ಡಿ ಮುದ್ನಾಳ ಅವರನ್ನು ನಗರದ ಸಾಯಿ ಗ್ರೂಪ್ ವತಿಯಿಂದ ಸನ್ಮಾನಿಸಲಾಯಿತು.

ನಂತರ ಮಾತನಾಡಿದ ನಗರಸಭೆ ಮಾಜಿ ಸದಸ್ಯರಾದ ಸ್ವಾಮಿದೇವ ದಾಸನಕೇರಿ, ಮಹೇಶರಡ್ಡಿ ಮುದ್ನಾಳ ಅವರು ಸಣ್ಣ ವಯಸ್ಸಿನಲ್ಲಿಯೇ ಉನ್ನತ ಜವಾಬ್ದಾರಿಯನ್ನು ಅಲಂಕರಿಸಿದ್ದಾರೆ. ಅವರು ತಮ್ಮ ತಂದೆಯವರಾದ ದಿ. ವೆಂಕಟರೆಡ್ಡಿ ಮುದ್ನಾಳ ಅವರ ಮಾರ್ಗದಲ್ಲಿಯೇ ನಡೆದು, ಯುವ ನಾಯಕರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲಿ. ಸಂಘಟನೆಯ ಮೂಲಕ ಸದಾ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.

ಮತ್ತೋರ್ವ ಮುಖಂಡರಾದ ಚನ್ನಯ್ಯ ಮಾಳಿಕೇರಿ ಮಾತನಾಡಿ, ತಂದೆಯವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಾ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ದೊಡ್ಡ ಮಟ್ಟದ ನಾಯಕರಾಗಿ ಬೆಳೆಯಿರಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಾಯಿ ಗ್ರೂಪ್ ಅಧ್ಯಕ್ಷರಾದ ಚಂದ್ರು ರಾಠೋಡ್, ಚನ್ನಯ್ಯ ಮಾಳಿಕೇರಿ, ಸ್ವಾಮಿದೇವ ದಾಸನಕೇರಿ, ಲಿಂಗಪ್ಪ ಹತ್ತಿಮನಿ, ನಿಂಗಪ್ಪ ವಡ್ನಳ್ಳಿ, ಪರಮರೆಡ್ಡಿ ಕಂದಕೂರ್, ಡಾ. ಭೀಮರಾಯ ಲಿಂಗೇರಿ, ಪುರ ಚವ್ಹಾಣ, ಕೀಶನ್ ಚವ್ಹಾಣ, ನಾಗರಾಜ ಈಟೇಕರ್, ರಮೇಶ ದೊಡ್ಮನಿ, ರವಿ ಬಾಪೂರೆ, ನಾಗರಾಜ ಚಿನ್ನಾಕರ್, ಆಂಜನೇಯ ಬಬಲಾದ, ಸುಭಾಸ್ ಅಲ್ಲಿಪೂರ್, ಗೋಪಾಲ ದಾಸನಕೇರಿ, ಮಲ್ಲು ಮುದ್ನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku