ಸೈದಾಪುರದಲ್ಲಿ ಅದ್ಧೂರಿಯಾಗಿ ಕನ್ನಿಕಾ ಪರಮೇಶ್ವರಿ ವಾಸವಿ ಜಯಂತಿ ಆಚರಣೆ

Posted by


ವಾಸವಿ ಮಾತೆಯ ಜೀವನಾದರ್ಶಗಳು ಮಾನವ ಕುಲಕ್ಕೆ ಸ್ಪೂರ್ತಿ : ಗುಜ್ಜಾ

ಸುದ್ದಿ ಬೆಳಕು ವಾರ್ತೆ

ಸೈದಾಪುರ ಏಪ್ರಿಲ್ 26 : ವಾಸವಿ ಮಾತೆಯ ಆತ್ಮಸ್ಥೈರ್ಯ ಅನನ್ಯವಾದುದು, ಮಾನವನ ಮೋಕ್ಷ ಸಾಧನೆಗೆ ಆತ್ಮೋದ್ಧರಕ್ಕೆ ತ್ಯಾಗ ಬಲಿದಾನಗಳೇ ಮಾರ್ಗವೆಂದು ತೋರಿಸಿಕೊಟ್ಟ ಜಗನ್ಮಾತೆ ವಾಸವಿ ದೇವಿಯ ಜೀವನಾದರ್ಶಗಳು ಮಾನವ ಸಮುದಾಯಕ್ಕೆ ಸ್ಪೂರ್ತಿ ಎಂದು ಆರ್ಯ ವೈಶ್ಯ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಗುಜ್ಜಾ ಅಭಿಪ್ರಾಯಪಟ್ಟರು.

ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಆರ್ಯ ವೈಶ್ಯ ಸಮಾಜದಿಂದ ಕನ್ನಿಕಾ ಪರಮೇಶ್ವರಿ ವಾಸವಿ ಜಯಂತಿ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಹಿಂಸೆ, ಆತ್ಮ ಬಲಿದಾನಗಳಿಂದ ಸದ್ಗತಿಯನ್ನು ಪಡೆಯಬೇಕು. ಯುದ್ಧ ಮತ್ತು ರಕ್ತಪಾತವನ್ನು ತಡೆಗಟ್ಟಿ ಮನುಕುಲಕ್ಕೆ ಶಾಂತಿ ಸಂದೇಶವನ್ನು ನೀಡುವ ಸಲುವಾಗಿ ಲೌಕಿಕ ಜೀವನವನ್ನು ತ್ಯಾಗ ಮಾಡಿ ಅಗ್ನಿ ಪ್ರವೇಶ ಮಾಡುವುದರ ಮೂಲಕ ದೇವತಾ ಸ್ಥಾನಮಾನ ಪಡೆದ ಅವತಾರಿಣಿ ಕನ್ನಿಕಾಪರಮೇಶ್ವರಿ. ವೈಶ್ಯ ಸಮಾಜವು ಅಹಿಂಸೆ, ತ್ಯಾಗವನ್ನು ನಂಬಿದ ಜನಾಂಗವಾಗಿದೆ, ಈ ಸಮಾಜದಲ್ಲಿ ಜನಿಸಿದ ನಾವುಗಳು ಧನ್ಯರು . ಪ್ರತಿಯೊಂದು ಜೀವಿಗಳಿಗೆ ಸುಖ, ಶಾಂತಿ, ಸಮೃದ್ಧಿ ದಯಪಾಲಿಸಲೆಂದು ನಾವುಗಳು ಭಕ್ತಿಪೂರ್ವಕವಾಗಿ ಪ್ರಾಥಿಸೊಣ್ಣ ಹಾಗೂ ಸಮುದಾಯದ ಸಮಗ್ರ ಅಭಿವೃದ್ಧಿ, ಸಂಘಟನೆ, ರಾಜಕೀಯ ಅವಕಾಶ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಆ ಮೂಲಕ ಸರ್ವಾಂಗಿಣ ಅಭಿವೃದ್ಧಿಯನ್ನು ಸಾಧಿಸಬೇಕು ಎಂದು ಕರೆ ನೀಡಿದರು. ಈ ಗ್ರಾಮ ಪಂಚಯತ ಹಾಗೂ ಪೊಲೀಸ್ ಇಲಾಖೆ ಸಹಕಾರಕ್ಕೆ ಧನ್ಯವಾದದಗಳು ತಿಳಿಸಿದರು.

ಈ ವೇಳೆ ಆರ್ಯವೈಶ್ಯ ಸೇವಾ ಸಂಘ, ಮಹಿಳಾ ಮತ್ತು ಯುವಜನ ಸಂಘದ ಸದಸ್ಯರು ಸೇರಿದಂತೆ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Suddi Belaku