ಬಸವಣ್ಣ ಜಯಂತಿ ಆಚರಣೆ – ಸಮಾನತೆಯ ಸಂದೇಶ ಸಾರಿದ ಭೀಮುನಾಯಕ

Posted by

ಸುದ್ದಿ ಬೆಳಕು ವಾರ್ತೆ 

ಯಾದಗಿರಿ, ಏಪ್ರಿಲ್ 20: “ಕಾಯಕವೇ ಕೈಲಾಸ” ಎಂಬ ಮಹತ್ವದ ತತ್ವವನ್ನು ವಿಶ್ವಕ್ಕೆ ಸಾರಿದ 12ನೇ ಶತಮಾನದ ಮಹಾನ್ ಸಮಾಜ ಸುಧಾರಕ ಬಸವಣ್ಣರು ಸಮಾನತೆಯ ಹೋರಾಟದ ಪ್ರತೀಕ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಹೇಳಿದರು.

ನಗರದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಾಲಯದಲ್ಲಿ 893ನೇ ಬಸವಣ್ಣ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಬಸವಣ್ಣರು ಸಮಗ್ರ ಕ್ರಾಂತಿಯ ಯುಗಪುರುಷರಾಗಿದ್ದು, ಕನ್ನಡದಲ್ಲಿ ವಚನ ಸಾಹಿತ್ಯ ರಚಿಸುವ ಮೂಲಕ ಸಮಾಜದಲ್ಲಿದ್ದ ಅಸಮಾನತೆ, ಅಂಧಶ್ರದ್ಧೆ ಮತ್ತು ಅನ್ಯಾಯಗಳನ್ನು ತಿದ್ದಲು ಮಹತ್ವದ ಪಾತ್ರ ವಹಿಸಿದರು. ಅವರು ಕೇವಲ ವಚನಕಾರರಲ್ಲ, ಶ್ರೇಷ್ಠ ಆರ್ಥಿಕ ತಜ್ಞರು, ವಿಚಾರವಂತರು ಹಾಗೂ ಸಮಾನತಾವಾದಿಗಳಾಗಿದ್ದರು ಎಂದು ಹೇಳಿದರು.

ಬಸವಣ್ಣರು ಸಮಾನತೆ, ಶ್ರಮದ ಗೌರವ ಮತ್ತು ಭಕ್ತಿಯ ಮೂಲಕ ಮಾನವ ಜೀವನವನ್ನು ಉನ್ನತ ಮಟ್ಟಕ್ಕೆ ತರುವ ಸಂದೇಶ ನೀಡಿದ್ದಾರೆ. ಅವರ ವಚನಗಳು ಇಂದಿಗೂ ಮಾನವೀಯ ಮೌಲ್ಯಗಳನ್ನು ಸಾರುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.

ಅನುಭವ ಮಂಟಪವನ್ನು ಸ್ಥಾಪಿಸಿ ಶಿವಶರಣರನ್ನು ಒಗ್ಗೂಡಿಸಿದ ಬಸವಣ್ಣರು, ಅಸ್ಪೃಶ್ಯತೆ ವಿರುದ್ಧ ಹೋರಾಡಿ ಸಾಮಾಜಿಕ ನ್ಯಾಯಕ್ಕೆ ಪೂರಕವಾದ ಕಾರ್ಯಗಳನ್ನು ಕೈಗೊಂಡರು. ಶರಣೆ ಅಕ್ಕಮಹಾದೇವಿಗೆ ಅನುಭವ ಮಂಟಪದಲ್ಲಿ ಅವಕಾಶ ನೀಡಿ ಮಹಿಳಾ ಸಮಾನತೆಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಂತೋಷಕುಮಾರ ನಿರ್ಮಲಕರ್, ವಿಶ್ವರಾಜ ಪಾಟೀಲ್, ಅಶೋಕ ನಾಯಕ, ರವಿ ಜಮ್ಮಾರ್, ಚೇತನ ಮಡಿವಾಳ, ಶರಣು ಹಬ್ಬಳ್ಳಿ, ನಾಗರಾಜ ಪಿಲ್ಲಿ, ವಿಶ್ವ ಯಾದಗಿರಿ, ರಮೇಶ ಡಿ. ನಾಯಕ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku