ವಿದ್ಯುತ್ ವಿತರಣಾ ಕೇಂದ್ರಗಳನ್ನು ಟಾಟಾ ಪವರ್‌ಗೆ ನೀಡಬೇಡಿ: ಶಾಸಕ ಕಂದಕೂರರಿಗೆ ಮನವಿ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಸರ್ಕಾರದ ಆಧೀನದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಟಾಟಾ ಪವರ್ ಖಾಸಗಿ ಕಂಪನಿಗೆ ಹಸ್ತಾಂತರ ಅಥವಾ ಮಾರಾಟ ಮಾಡಬಾರದು. ಸಾರ್ವಜನಿಕರ ಹಿತಾಸಕ್ತಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಹಿತದೃಷ್ಟಿಯಿಂದ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ಸರ್ಕಾರ ಕೂಡಲೇ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಸೋಮವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರ ಸಂಘ ಮತ್ತು ಒಕ್ಕೂಟದ ಪದಾಧಿಕಾರಿಗಳು ಮತ್ತು ಸಿಬ್ಬಂದಿ ಶಾಸಕ ಶರಣಗೌಡ ಕಂದಕೂರ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕಾರ್ಯ ನಿರ್ವಾಹಕ ಅಭಿಯ ಎಂತರ ಅಭಿಯಂತರ ರಾಘವೇಂದ್ರ ಡಿ.ಅವರು, ಜನಸಾಮಾನ್ಯರ ಹಿತವನ್ನು ಕಡೆಗಣಿಸಿ ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಗಳನ್ನು ಟಾಟಾ ಪವರ್ ಕಂಪನಿಗೆ ಹಸ್ತಾಂತರ ಇಲ್ಲವೇ ಮಾರಾಟ ಮಾಡುವ ನಿಯಮ ಸರಿಯಾಗಿಲ್ಲ. ಇದರಿಂದಾಗಿ ಕೆರೆ ಭಾಗದ ಜನರಿಗೆ ತುಂಬಾ ನಷ್ಟವಾಗುತ್ತದೆ ಎಂದರು.

ವಿದ್ಯುತ್ ಪೂರೈಕೆಯು ಸರ್ಕಾರದ ಮೂಲ ಜವಾಬ್ದಾರಿಯಾಗಿದ್ದು, ಇದನ್ನು ಖಾಸಗಿ ಕಂಪನಿಗಳಿಗೆ ವಹಿಸಿದರೆ ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯ ಮೂಲಭೂತ ರಚನೆಯಲ್ಲಿಯೇ ಮಹತ್ತರ ಬದಲಾವಣೆ ಉಂಟಾಗುವ ಸಾಧ್ಯತೆ ಹೆಚ್ಚಾಗಲಿದೆ. ಇದರ ಪರಿಣಾಮ ರಾಜ್ಯದ ಎಲ್ಲಾ ವರ್ಗದ ವಿದ್ಯುತ್ ಗ್ರಾಹಕರ ಮೇಲೆ, ವಿಶೇಷವಾಗಿ ರೈತರು, ಗ್ರಾಮೀಣ ಕುಟುಂಬಗಳು, ಸಾರ್ವಜನಿಕ ಕುಡಿಯುವ ನೀರು ಸರಬರಾಜು ಸಂಸ್ಥೆಗಳು, ಆಸ್ಪತ್ರೆಗಳು, ಸ್ಥಳೀಯ ಸಂಸ್ಥೆಗಳು ಹಾಗೂ ರಾಜ್ಯ ಸರಕಾರದ ಅನುದಾನ ಮತ್ತು ಸಹಾಯಧನಗಳ ಮೇಲೆ ಅವಲಂಬಿತವಾಗಿರುವ ಕಲ್ಯಾಣ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರಾಘವೇಂದ್ರ ಅವರು ವಿವರಿಸಿದರು.

ಮನವಿ ಸ್ವೀಕರಿಸಿದ ಶಾಸಕ ಕಂದಕೂರ, ಜೇಸ್ಕಾಂ ಮನವಿಯನ್ನು ಕೂಡಲೇ ಸರ್ಕಾರದ ಗಮನಕ್ಕೆ ತರಲಾಗುವುದೆಂದು ಸಕರಾತ್ಮಕವಾಗಿ ಹೇಳಿದರು.
ಈ ವೇಳೆಯಲ್ಲಿ ಕಾರ್ಯ ನಿರ್ವಾಹಕ ಅಭಿಯಂತರ ಶಂಕರ್ ಗುತ್ತಿ, ಸಹಾಯಕ ಕಾರ್ಯ ನಿರ್ವಹಕರುಗಳಾದ ಸುರೇಖಾ ಕಟ್ಟಿಮನಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕಡೇಶ್ವರ, ಸಂಜೀವಕುಮಾರ, ಎ.ಟಿ. ರಾಥೋಡ್, ಅಂಬರೀಷ್, ಜರೀನಾಬೇಗಂ, ಲೆಕ್ಕಾಧಿಕಾರಿ ಬಸವರಾಜ, ಅಶೋಕ, ಪದಾಧಿಕಾರಿಗಳಾದ ಚಂದಪ್ಪ, ದೇವೀಂದ್ರಪ್ಪ, ಮೋಹನ ರಾಥೋಡ್, ಯಮುನಪ್ಪ ಠಣಕೆದಾರ, ಅಶೋಕ ಚವ್ಹಾಣ, ದೇವಪ್ಪ, ಮೆಹೆಬೂಬ್, ಥಾಮಸ್, ಮೋಸಿನ, ಯಲ್ಲಪ್ಪ, ಆನಂದಕುಮಾರ್, ದೇವಪ್ಪ ಬಸವರಾಜ, ಶ್ವೇತಾ ದಾಸನ್, ಲಲಿತಾ ಸೇರಿದಂತೆಯೇ ಇತರರಿದ್ದರು. ಜೆಸ್ಕಾಂ ಕಚೇರಿಯಿಂದ ಇಲ್ಲಿನ ಶಾಸಕರ ಜನ ಸಂಪರ್ಕ ಕಚೇರಿಯವರೆಗೂ ಕಾಲ್ನಡಿಗೆ ಮುಖಾಂತರ ತೆರಳಿ ಮನವಿ ಸಲ್ಲಿಸಿದರು.


ನಿರಂತರ ಕರೆಂಟ್ ಕೊಡುವ ಭರವಸೆ ನೀಡಿ
ಜಿಲ್ಲೆಯ ರೈತರಿಗೆ ಅಗತ್ಯವಿದ್ದಾಗ ನಿರಂತರ ಏಳು ತಾಸು ಕರೆಂಟ್ ಕೊಡಲಾಗುವುದು ಮತ್ತು ಸಾರ್ವಜನಿಕರಿಗೂ ತೊಂದರೆಯಾಗದಂತೆಯೇ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುವುದೆಂಬ ಭರವಸೆ ತಾವುಗಳು ನೀಡಿದರೇ ನಾನು ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಸಚಿವ ಮತ್ತು ಸಂಬಂಧಪಟ್ಟ ಸಂಸದರೊಂದಿಗೆ ಈ ಬಗ್ಗೆ ಸುಧೀರ್ಘ ಚರ್ಚೆ ಮಾಡಿ ಬೇಡಿಕೆ ಈಡೆಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವೆ.
ಶರಣಗೌಡ ಕಂದಕೂರ
ಶಾಸಕರು, ಗುರುಮಠಕಲ್

Leave a Reply

Your email address will not be published. Required fields are marked *

Suddi Belaku