
ಸುದ್ದಿ ಬೆಳಕು ವಾರ್ತೆ
ವಡಗೇರಾ : ಇತ್ತೀಚಿಗೆ ಸಮೀಪದ ಬಸವನಗರ ಗ್ರಾಮದ ಮರಮ್ ಕ್ವಾರಿಯ ತೆಗ್ಗಿನಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಮೂರು ಜನರ ಕುಟುಂಬಗಳಿಗೆ ಸರ್ಕಾರ ಮತ್ತು ಡಿಬಿಎಲ್ ಕಂಪನಿಯ ಮಾಲೀಕರು ತಲಾ 20.ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಅಬ್ದುಲ್ ವಡಗೇರಾ ಚಿಗಾನೂರ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸೂರತ್ ಚೆನ್ನೈ ರಸ್ತೆಯ ಗುತ್ತಿಗೆದಾರರಾದ ಡಿಬಿಎಲ್ ಮಾಲಿಕತ್ವದ ಕಂಪನಿಯವರು ತೋಡಿ ಹಾಗೆಯೇ ಬಿಟ್ಟಿರುವ ಮರಮ್ ಕ್ವಾರಿಯಲ್ಲಿ ಬಿದ್ದು ಗುಂಡಮ್ಮ,ಸುಜಾತ,ಶಿವಕಾಂತಮ್ಮಮೂರು ಜನ ಮೃತಪಟ್ಟಿದ್ದಾರೆ.ಮೃತರು ತುಂಬಾ ಬಡ ಕುಟುಂಬದವರಾಗಿದ್ದಾರೆ.ಈ ಘಟನೆಗೆ ಡಿಬಿಎಲ್ ಕಂಪನಿ ಮಾಲೀಕರ ನಿರ್ಲಕ್ಷವೇ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಕಾನೂನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಹೆಚ್ಚಿನ ಪ್ರಮಾಣದ ತಗ್ಗುತ್ತೋಡಿ ಹಾಗೆಯೇ ಬಿಟ್ಟಿದ್ದಾರೆ ಮರಮ್ ಕ್ವಾರಿ ಪಕ್ಕದಲ್ಲಿಯೇ ಮುಖ್ಯ ರಸ್ತೆ ಮತ್ತು ಶಾಲೆಯಿದ್ದು ಇದು ತುಂಬಾ ಅಪಾಯಕಾರಿಯಾಗಿದೆ ಶಾಲೆ ಮತ್ತು ಮರಮ್ ಕ್ವಾರಿ ಸುತ್ತಲು ತಡೆಗೋಡೆ ನಿರ್ಮಿಸಿ ಮೃತ ಕುಟುಂಬಗಳಿಗೆ ಸರ್ಕಾರ ಮತ್ತು ರಸ್ತೆ ಕಾಮಗಾರಿಯ ಗುತ್ತಿಗೆದಾರರು ಸೂಕ್ತ ಪರಿಹಾರ ನೀಡಬೇಕು ಒಂದು ವೇಳೆ ವೇಳೆ ವಿಳಂಬ ಮಾಡಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಗ್ರಾಮಸ್ಥರೊಂದಿಗೆ ಸೇರಿ ರಸ್ತೆ ತಡೆದು ಉಗ್ರ ಹೋರಾಟ ಮಾಡುವುದಾಗಿ ತಾಲೂಕು ಅಧ್ಯಕ್ಷ ಅಬ್ದುಲ್ ಚಿಗಾನೂರ ಎಚ್ಚರಿಸಿದ್ದಾರೆ.












Leave a Reply