ಪರಿಸರಸ್ನೇಹಿ ತಂತ್ರಜ್ಞಾನದಿಂದ ಪರಿಸರ ರಕ್ಷಣೆ : ಸತ್ಯನಾರಾಯಣ

Posted by

ಸುದ್ದಿ ಬೆಳಕು ವಾರ್ತೆ

ಬಳ್ಳಾರಿ:ಇಂಜಿನಿಯರ್‌ಗಳು ಮತ್ತು ತಂತ್ರಜ್ಞರು ಸುಸ್ಥಿರ ಅಭಿವೃದ್ಧಿ, ನವೀಕರಿಸಬಹುದಾದ ಇಂಧನ ಬಳಕೆ ಮತ್ತು ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಾಲಿನ್ಯ ನಿಯಂತ್ರಣ ಮತ್ತು ಹಸಿರು ಭವಿಷ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತ ಚಿತ್ತ ಹರಿಸಬೇಕಿದೆ ಅಂಥಾ ಇಂಜಿನಿಯರ್ಸ ಹಾಗೂ ಆರ್ಕಿಟೆಕ್ಟ್ ಅಸೋಸಿಯೇಷನ್ ಅಧ್ಯಕ್ಷ ಎ ಎಸ್ ಸತ್ಯನಾರಾಯಣ ಅವರು ಕರೆ ನೀಡಿದರು.

ಇಂದು ಬಳ್ಳಾರಿಯ ಮೋಕಾ ರಸ್ತೆಯ ಸಂಗನಕಲ್ಲು ಬಳಿಯ ಪ್ರಕೃತಿ ಲೇಔಟ್ ನಲ್ಲಿನ ಎಸಿಸಿಇಎ ನಿವೇಶನದ ವಿಶ್ವ ಪರಿಸರ ದಿನವನ್ನು ಸಸಿ‌ ನೇಡುವ ಮೂಲಕ ಆಚರಣೆ ಮಾಡಿ ಮಾತನಾಡಿದರು.ನಾವೆಲ್ಲ ಇಂಜೀನೀಯರ್ಸಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ, ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಕೆ ಮಾಡುವ ಮೂಲಕ ಮನೆಗಳನ್ನು ನಿರ್ಮಾಣ ಮಾಡುವದು ಅಗತ್ಯವಿದೆ. ಅಲ್ಲದೇ ನಾವು ಕಟ್ಟಡದ ನಿರ್ಮಾಣದ ಕಡೆಗಳಲ್ಲಿ ಸಸಿಗಳನ್ನು ನೆಡಲು ಮುಂದಾಗಬೇಕು ಅಂಥಾ ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಇಂಜಿನಿಯರ್ ಈಶ್ವರಗೌಡ ಅವರು ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಹಳೆಯ ಪತ್ರಿಕೆಗಳಿಂದ ಪೆನ್ಸಿಲ್ ತಯಾರಿಸಿ ನಂತರ ಅವುಗಳನ್ನು ‌ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡಲು ತೀರ್ಮಾನಿಸಿದೆ ಅಂಥಾ ತಿಳಿಸಿದರು.

ಮಹಾನಗರ ಪಾಲಿಕೆ ಜೋನಲ್ ಕಮೀಷನರ್ ಗುರುರಾಜ್ ಸೌದಿ.ಎಇಇ ವಿರೇಶ್..ಹಿರಿಯ ಇಂಜಿನಿಯರ್ಸಗಳಾದ ಜೆ.ಎಲ್ ಶ್ರೀನಿವಾಸ್.ಸಿ.ಬಿ.ಶ್ರೀನಿವಾಸ ರೆಡ್ಡಿ ಅವರುಗಳು ಸೇರಿದಂತೆ ವೆಂಡರ್ಸಗಳಿಗೆ ಸಸಿ ಕೊಡುವ ಮೂಲಕ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಇಂಜಿನಿಯರ್ಸ್ ಹಾಗೂ ಆರ್ಕಿಟೆಕ್ಟ್ ಅಸೋಸಿಯೇಷನ್ ಉಪಾಧ್ಯಕ್ಷ ಶಶಿಧರ ಗಜೇಂದ್ರಗಡ..ಕಾರ್ಯದರ್ಶಿ ರಾಕೇಶ್ ಬಿ.ಟಿ.ಜಂಟಿ ಕಾರ್ಯದರ್ಶಿ ಸುಭಾಶ್ ಚಂದ್ರ.. ಜಂಟಿ ಕಾರ್ಯದರ್ಶಿ ಆರ್ ಸುನೀಲ್..ಖಜಾಂಚಿ ನಿರಂಜನ್ ಪಿ ಎಂ.ಸಹ ಖಜಾಂಚಿ ಬಿ.ಮೂರ್ತಿ ಸೇರಿದಂತೆ ಅಸೋಸಿಯೇಷನ್ ಸದಸ್ಯರುಗಳು ಹಾಗೂ ಉದ್ಯಮಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

Suddi Belaku